ಬಿಗ್ ಬಾಸ್ ಕಾರ್ಯಕ್ರಮದ ಎಂಟನೇ ಸೀಸನ್ ಗೆ ಇದೀಗ ಬಣ್ಣ ತುಂಬಿ ಕೊಳ್ಳತೊಡಗಿದೆ. ಟ್ರೋಲ್ ಪೇಜ್ ಗಳು ಏನ್ ಗುರು ಚಿಕ್ಕಮಕ್ಕಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುತ್ತಿದ್ದಾರೆ ಎಂದು ಟ್ರೋಲ್ ಮಾಡಲಾರಂಭಿಸಿದೆ.
ಈ ನಡುವೆ ಬಾ ಗುರು ಅನ್ನೋ ವಾಕ್ಯದ ಮೂಲಕವೇ ಫೇಮಸ್ ಆಗಿರುವ ಬ್ರೋ ಗೌಡ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.
ಶಮಂತ್ ಅನ್ನೋ ಹೆಸರಿದ್ದರೂ ಟ್ರೋಲ್ ಪೇಜ್ ಗಳ ಮೂಲಕ ಬ್ರೋ ಗೌಡ ಎಂದೇ ಇವರು ಪ್ರಸಿದ್ಧರಾಗಿದ್ದು, ಇವರ ಬಾ ಗುರು ಅನ್ನುವ ಸಾಲುಗಳ ಕಾರಣದಿಂದ, ಬಾ ಗುರು ಟೀ ಕುಡಿಯೋಣ, ಬಾ ಗುರು ಬಿರಿಯಾನಿ ತಿನ್ನೋಣ, ಬಾ ಗುರು ಬಟ್ಟೆ ತಗೋ, ಬಾ ಗುರು ಕಟ್ಟಿಂಗ್ ಮಾಡ್ಸು ಅನ್ನೋ ಅಂಗಡಿಗಳು ಬಾಗಿಲು ತೆರೆದಿವೆ.
ಸಿನಿಮಾ ರಂಗದಲ್ಲಿ ಸಾಧನೆ ಮಾಡಬೇಕು ಎಂದು ಬಂದ ಶಮಂತ್ ಗೆ ಚಂದನವನ ಭಾಗ್ಯದ ಬಾಗಿಲು ತೆರೆಯಲಿಲ್ಲ. ಹೀಗಾಗಿ ತಾವೇ ವೆಬ್ ಸೀರಿಸ್ ಮೂಲಕ ನಾಯಕರಾಗಲು ಹೊರಟರು. ಈ ವೇಳೆ ಅವರು ಮಾಡಿದ ಪಾತ್ರವೇ ಬ್ರೋ ಗೌಡ, ಹೀಗಾಗಿ ಶಮಂತ್ ಬ್ರೋ ಗೌಡ ಆಗಿ ಫೇಮಸ್ ಆಗಿದ್ದಾರೆ.
ಇನ್ನೂ ಬಿಗ್ ಬಾಸ್ ಮನೆಗೆ ಬಂದಿರುವ ಬ್ರೋ ಗೌಡ, ವೀಕ್ಷಕರನ್ನು ರಂಜಿಸುವ ಸಾಧ್ಯತೆಗಳಿದೆ. ಈ ಹಿಂದೆ ಅವರು ಮಾಡಿರೋ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು,
ಈ ನಡುವೆ ಮನೆ ಪ್ರವೇಶಕ್ಕೂ ಮುನ್ನ ಸುದೀಪ್ ಜೊತೆ ಮಾತನಾಡಿದ ಶಮಂತ್ ತಾವು ಸಾಗಿ ಬಂದ ಹಾದಿಯನ್ನು ವಿವರಿಸಿದ್ದಾರೆ.
ಈ ವೇಳೆ ಸುದೀಪ್ ಅವರನ್ನು ಸೆಳೆದಿದ್ದು ಬ್ರೋಗೌಡ ಅವರ ಹೇರ್ ಸ್ಟೈಲ್, ಗುರುಕಿರಣ್ ಅವರನ್ನು ಮೀರಿಸುವಂತ ಹೇರ್ ಸ್ಟ್ರೈಲ್ ಕಂಡ ಸುದೀಪ್ ಕೇಳಿದ್ದು ಇದೋ ವರ್ಜಿನಲ್ ಅಥವಾ ವಿಗ್ ಎಂದು.
Discussion about this post