ಕುಣಿಯೋದೆ ಇವ್ರ್ ಬ್ಯುಜಿ಼ನೆಸ್ಸು ಬಿಗ್ಬಾಸ್ ಮನೆಯಲ್ಲಿ ಯಾರ್ಯಾರನ್ನ ತಕಧಿಮಿತಾ ಅಂತ ಡ್ಯಾನ್ಸ್ ಮಾಡಿಸ್ತಾರೆ ಅನ್ನುವುದು ಇನ್ನೊಂದಿಷ್ಟು ದಿನದಲ್ಲಿ ಗೊತ್ತಾಗಬೇಕಾಗಿದೆ. 10ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಡ್ಯಾನ್ಸರ್ ಕಿಶನ್ ಕರ್ನಾಟಕಕ್ಕೆ ಎಷ್ಟು ಪರಿಚಯವೋ ಗೊತ್ತಿಲ್ಲ. ಆದರೆ ಸೆಲೆಬ್ರೆಟಿಗಳಿಗೆ ಮಾತ್ರ ಇವರು ಸಿಕ್ಕಾಪಟ್ಟೆ ಪರಿಚಯ.
https://www.youtube.com/watch?v=eYG7th72_wc
ಲೈಮ್ ಲೈಟ್ ನಲ್ಲಿದ್ದ ಚಂದನ್ ಆಚಾರ್ ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರಿಗೆ ಹತ್ತಿರವಾದರು.ಇವರು ನಟನೆ ಮಾಡ್ತಾರೆ, ಹಾಡೂ ಹಾಡ್ತಾರೆ. ಮಾಡಿರುವುದು ಎರಡು ಸಿನಿಮಾವಾದರೂ ತಾಕತ್ತು 20 ಸಿನಿಮಾಕ್ಕೂ ಮೀರಿದ್ದು. ಹೀಗಾಗಿ ಮುಂಬರುವ ದಿನದಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೇಗೆ ಇರುತ್ತಾರೆ ಅನ್ನುವುದು ಕುತೂಹಲ. ಬಿಗ್ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಎಂಟ್ರಿ ಹಾಕಿದವರು ಚಂದನ್ ಆಚಾರ್.
https://www.youtube.com/watch?v=-aF9algXX7w
ಕಿರಿಕ್ ಪಾರ್ಟಿ’, ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಚಂದನ್ ಆಚಾರ್ ಅವರಿಗೆ ಸುಳ್ಳನ್ನು ಸತ್ಯ ಅಂತ ನಂಬಿಸೋ ಟ್ಯಾಲೆಂಟ್ ಕರಗತ. ಜೊತೆಗೆ ಎಲ್ಲರ ಜೊತೆ ಪ್ರೀತಿಯಿಂದ ಇರಬೇಕು ಎಂಬ ಆಸೆಯೂ ಚಂದನ್ ಅವರದ್ದು. ಅದಕ್ಕೆ ಬಿಗ್ ಬಾಸ್ ಹೇಗೆ ಅವಕಾಶ ಕೊಡುತ್ತದೋ ಗೊತ್ತಿಲ್ಲ.
Discussion about this post