ಬಿಗ್ ಬಾಸ್ ಕಾರ್ಯಕ್ರಮಕ್ಕೆ ಇಂದು ತೆರೆ ಬೀಳಲಿದ್ದು. ಮಹಾಮನೆಯ 2020ರ ಸಾಲಿನ ವಿನ್ನರ್ ಅನ್ನು ಸುದೀಪ್ ಕೆಲವೇ ಕ್ಷಣಗಳಲ್ಲಿ ಘೋಷಿಸಲಿದ್ದಾರೆ.
ಈಗಾಗಲೇ ಇನ್ನೋವೇಟಿವ್ ಫಿಲ್ಮಂ ಸಿಟಿಯಲ್ಲಿ ಶೂಟಿಂಗ್ ಪ್ರಾರಂಭಗೊಂಡಿದೆ. ಮೊದಲಿಗೆ ದೀಪಿಕಾ ದಾಸ್ ಜೊತೆ ಮಾತುಕತೆ ಮುಗಿಸಿರುವ ಕಿಚ್ಚ ಸುದೀಪ್ ಮನೆಯೊಳಗಡೆ ಇರುವ ಮೂರು ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ.
ಇನ್ನು ಕೆಲ ಕಲಾವಿದರ ನೃತ್ಯ ಕಾರ್ಯಕ್ರಮ ನಡೆದಿದೆ. ಇದೀಗ ಬಂದಿರುವ ಶಾಕಿಂಗ್ ಸುದ್ದಿ ಪ್ರಕಾರ ಮನೆಯಿಂದ ವಾಸುಕಿ ವೈಭವ್ ಹೊರ ಬಂದಿದ್ದಾರೆ.
ಎಲ್ಲರೂ ಫೈನಲ್ ಗೆ ವಾಸುಕಿ ವೈಭವ್ ಮತ್ತು ಶೈನ್ ಶೆಟ್ಟಿ ಬರ್ತಾರೆ ಎಂದು ಭಾವಿಸಿದ್ದರು. ಆದರೆ ಕುರಿ ಪ್ರತಾಪ್ ಅಭಿಮಾನ ಬಳಗದ ಆಡಿದ ಕೊನೆಯ ಕ್ಷಣದ ಆಟ, ಮಹಾಮನೆಯ ಆಟವನ್ನೇ ಬದಲಾಯಿಸಿದೆ.
ವಾಸುಕಿ ವೈಭವ್ ಹೊರತುಪಡಿಸಿದರೆ ಬಿಗ್ ಬಾಸ್ ಮನೆಯಲ್ಲಿ ಉಳಿಯುವವರು ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ. ಇವರಿಬ್ಬರು ಸಮಬಲ ಇದ್ದಾರೆ.
ಈಗಾಗಲೇ ಇಬ್ಬರೂ ಮನರಂಜನೆ ವಿಚಾರದಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಫಿಸಿಕಲ್ ಟಾಸ್ಕ್ ವಿಚಾರದಲ್ಲಿ ಶೈನ್ ಶೆಟ್ಟಿ ಮುಂದಿದ್ದರು, ಕುರಿ ಹಿಂದೆ ಉಳಿದಿದ್ದರು. ಆದರೆ ಕೊನೆಯ ದಿನಗಳಲ್ಲಿ ಕುರಿ ಕೂಡಾ ಫಿಸಿಕಲ್ ಟಾಸ್ಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
Discussion about this post