ಬೆಂಗಳೂರು : ಬಿಗ್ ಬಾಸ್ 6 ರ ವಿನ್ನರ್ ಶಶಿ, ಬಿಗ್ ಬಾಸ್ ಬಳಿಕ ರೈತನಾಗಿಯೇ ಮುಂದುವರಿದರು.
ಈ ಮೂಲಕ ಬಿಗ್ ಬಾಸ್ ಮನೆಯಿಂದ ಹೊರ ಬಂದವರು ಚಂದನವನದ ಕಡೆಗೆ ಹೋಗ್ತಾರೆ ಅನ್ನೋ ಮಾತನ್ನು ಸುಳ್ಳು ಮಾಡಿದರು.

ಹಾಗಂತ ಅವರಿಗೆ ಚಿತ್ರರಂಗದಿಂದ ಕರೆ ಬಂದಿಲ್ಲ ಎಂದಲ್ಲ. ಸಾಕಷ್ಟು ಅವಕಾಶಗಳು ಬಂದಿತ್ತು. ಆದರೆ ರೈತರೇ ಆಗಿರುವ ಶಶಿ, ಬಿಗ್ ಬಾಸ್ ಮನೆಯಿಂದ ಸಿಕ್ಕ ಎಲ್ಲಾ ಲಾಭಗಳನ್ನು ಕೃಷಿಗಾಗಿ ಸುರಿದರು. ಕೃಷಿ ಸಂಬಂಧಿಸಿದ ವ್ಯವಹಾರಗಳಿಗೆ ತೊಡಗಿಸಿದರು.

ಈ ನಡುವೆ ಚಿತ್ರವೊಂದನ್ನು ಒಪ್ಪಿಕೊಂಡಿರುವ ಶಶಿ, ಅದರಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಸಲುವಾಗಿ ದೇಹವನ್ನು ದಂಡಿಸಿರುವ ಅವರು ಸಿಕ್ಸ್ ಪ್ಯಾಕ್ ಶಶಿಯಾಗಿ ಹೊರ ಹೊಮ್ಮಿದ್ದಾರೆ.

ಈಗಾಗಲೇ ಶಶಿ ನಟನೆಯ ಮೆಹಬೂಬ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಹಾಡು ಮತ್ತು ಫೈಟ್ ದೃಶ್ಯಗಳು ಬಾಕಿ ಇದೆ.
ಫೈಟ್ ಶೂಟಿಂಗ್ ಸಲುವಾಗಿ ಶಶಿ ಸಿಕ್ಸ್ ಪ್ಯಾಕ್ ಶಶಿಯಾಗಿ ಹೊರ ಹೊಮ್ಮಿದ್ದಾರೆ.
ವಿಶೇಷ ಅಂದ್ರೆ ಶಶಿ ಈ ಸಿಕ್ಸ್ ಪ್ಯಾಕ್ ಸಾಧನೆಗಾಗಿ ತೆಗೆದುಕೊಂಡಿದ್ದು ಕೇವಲ 40 ರಿಂದ 50 ದಿನ. ಇದು ಹೇಗೆ ಸಾಧ್ಯವಾಯ್ತು ಅಂದ್ರೆ, ಊರಲ್ಲಿ ಕೃಷಿ ಮಾಡುತ್ತಿದ್ದೆ. ಹೀಗಾಗಿ ದೇಹ ಒಂದು ಶೇಫ್ ಗೆ ಬಂತು.
ಬೆಂಗಳೂರಿಗೆ ಬಂದ ಬಳಿಕ ದಿನಕ್ಕೆರಡು ಬಾರಿ ವರ್ಕೌಟ್ ಶುರುವಾಯ್ತು. ಜೊತೆಗೆ ಡಯೆಟ್ ಕೂಡಾ ಕಾರಣ ಅಂದಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯ ಫ್ಲಟ್ ಬಾಯ್ ಇದೀಗ ರಗಡ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.
Discussion about this post