ಮಗು ಹಸಿವಿನಿಂದ ಅಳುತ್ತಿತ್ತು. ಆದರೆ ರೈಲಿನಲ್ಲಿ ಕೂತಿದ್ದ ಸಹ ಪ್ರಯಾಣಿಕರ ಮನಸ್ಸು ಕರಗಲೇ ಇಲ್ಲ. ಕೈಯಲ್ಲಿ ಮಗು ಹಿಡಿದುಕೊಂಡಿದ್ದ ಮಹಿಳೆ ಅನೇಕ ಸಲ ಸಹ ಪ್ರಯಾಣಿಕರತ್ತ ನೋಡಿದರು, ಆದರೆ ಯಾರೊಬ್ಬರು ಮಗು ಅಳುತ್ತಿದೆ, ಆಕೆಯ ಸಂಕಷ್ಟವೇನು ಎಂದು ಕೇಳಲಿಲ್ಲ.
ಸಹ ಪ್ರಯಾಣಿಕರು ಸೀಟು ಬಿಟ್ಟು ಕೊಡುತ್ತಿಲ್ಲವೆಂದು ಮಗುವಿನ ಹಸಿವನ್ನು ತಡೆಯಲು ಸಾಧ್ಯವೇ. ಹೀಗಾಗಿ ತಾಯಿ ನಿಂತೆ ಮಗುವಿಗೆ ಹಾಲುಣಿಸಿದ್ದಾಳೆ ತಾಯಿ.
ರೈಲಿನಲ್ಲಿ ತನ್ನ ಆರು ತಿಂಗಳ ಮಗು ಚಾರ್ಲಿಯನ್ನು ಎತ್ತಿಕೊಂಡು ಕೇಟ್ ತನ್ನ ಮನೆಯಿಂದ ವಿಕ್ ಫೋರ್ಡ್ ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪ್ರಯಾಣಿಕರು ಕಿಕ್ಕಿರಿದ್ದಿದ್ದರು. ಲಂಡನ್ ನಲ್ಲಿ ಈ ಘಟನೆ ನಡೆದಿದ್ದು ಕೇಟ್ ಹಿಚ್ಚೆನ್ಸ್ ನಿಂತುಕೊಂಡು ಮಗುವಿಗೆ ಸ್ತನ್ಯಪಾನ ಮಾಡಿಸಿದ್ದಾರೆ.
ಮಗುವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು ಇದನ್ನು ಕಂಡ ಯಾರೂ ಆಕೆ ಸೀಟು ಬಿಟ್ಟುಕೊಡಲಿಲ್ಲ. ಇದರಿಂದ ಕೇಚ್ ಅರ್ಧ ಗಂಟೆ ನಿಂತುಕೊಂಡೇ ಮಗುವಿಗೆ ಹಾಲುಣಿಸಿದ್ದಾರೆ.
ಕೇಟ್ ತನ್ನ ಇನ್ ಸ್ಟಾಗ್ರಾಂನಲ್ಲಿ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋ ಹಾಕಿ ಜನರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Discussion about this post