ಪೌರತ್ವ ಕಾಯ್ದೆಗೆ ದೇಶದೆಲ್ಲೆಡೆ ಒಲವು – ಶೇ.36 ಮಂದಿಗೆ ಮಾತ್ರ ವಿರೋಧ
ಪೌರತ್ವ ಕಾಯ್ದೆ ಕುರಿತಂತೆ ದೇಶದೆಲ್ಲೆಡೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಇನ್ನು ಮುಸ್ಲಿಂ ಸಮುದಾಯದ ಮಂದಿ ಈ ಕಾಯ್ದೆ ಬಗ್ಗೆ ಅನಗತ್ಯವಾಗಿ ಭೀತಿಗೆ ಒಳಗಾಗಿದ್ದಾರೆ. ಭಾರತೀಯ ಮುಸ್ಲಿಂಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಸಾವಿರ ಸಲ ಸ್ಪಷ್ಟಪಡಿಸಲಾಗಿದೆ. ಹಾಗಿದ್ದರೂ ಕೂಡಾ ಕಾಯ್ದೆ ಕುರಿತ ತಪ್ಪು ಅಭಿಪ್ರಾಯ ಇನ್ನೂ ಕಡಿಮೆಯಾಗಿಲ್ಲ.
ಈ ನಡುವೆ ಪೌರತ್ವ ಕಾಯ್ದೆ ಪರ ಶೇ.62ರಷ್ಟು ಜನ ಒಲವು ಹೊಂದಿರುವುದು ಗೊತ್ತಾಗಿದೆ. ಐಎಎನ್ಎಸ್ ಮತ್ತು ಸಿ ವೋಟರ್ ನಡೆಸಿರುವ ಸಮೀಕ್ಷೆಯಲ್ಲಿ ಭಾಗಿಯಾದ ಜನರ ಪೈಕಿ 62.1 % ದಷ್ಟು ಜನ ಪೌರತ್ವ ಕಾಯ್ದೆ ತಿದ್ದುಪಡಿಗೆ ತಮ್ಮ ಬೆಂಬಲವಿದೆ ಅಂದಿದ್ದಾರೆ.
ಶೇ.36.8 ರಷ್ಟು ಜನರು ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪೂರ್ವ ಭಾರತದಲ್ಲಿ ಶೇ. 57.3, ಪಶ್ಚಿಮ ಭಾರತದಲ್ಲಿ ಶೇ 57.3 ಪಶ್ಚಿಮ ಭಾರತದಲ್ಲಿ ಶೇ 64.2, ಉತ್ತರ ಭಾರತದಲ್ಲಿ ಶೇ.67.7 ಹಾಗೂ ದಕ್ಷಿಣ ಭಾರತದಲ್ಲಿ ಶೇ 58.5 ರಷ್ಟು ಮಂದಿ ಕಾಯ್ದೆ ಪರ ಬೆಂಬಲ ಸೂಚಿಸಿದ್ದಾರೆ.
ಇನ್ನು ಅಸ್ಸಾಂ ನಲ್ಲಿ 68.1 % ದಷ್ಟು ಮಂದಿ ಪೌರತ್ವ ಕಾಯ್ದೆಯನ್ನು ವಿರೋಧಿಸಿದರೆ 31% ಮಂದಿ ಬೆಂಬಲಿಸಿದ್ದಾರೆ.
ಇದರೊಂದಿಗೆ ದೇಶಾದ್ಯಂತ 63.5 % ಮುಸ್ಲಿಮರು ಕಾಯ್ದೆಯನ್ನು ವಿರೋಧಿಸಿದರೆ, 35.5 % ಮುಸ್ಲಿಮರು ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಜನಸಂಖ್ಯೆ ಹೆಚ್ಚುತ್ತದೆ, ಇದರಿಂದ ಆರ್ಥಿಕ ಭಾರವಾಗುತ್ತದೆ ಎಂದು ಶೇ 73ರಷ್ಟು ಮುಸ್ಲಿಮರು ಹೇಳಿದ್ದಾರೆ. ಶೇ 63ರಷ್ಟು ಮಂದಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದುಗಳ ಪೈಕಿ 32.3% ಮಂದಿ ಕಾಯ್ದೆಯನ್ನು ವಿರೋಧಿಸಿದರೆ 66.7% ಮಂದಿ ಪೌರತ್ವ ಕಾಯ್ದೆಗೆ ಜೈ ಅಂದಿದ್ದಾರೆ.
Discussion about this post