ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿಯಲ್ಲಿರುವ ಸಂತ್ರಸ್ಥ ಯುವತಿ ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ.
29 ಸೆಕೆಂಡ್ ಗಳ ಮೂರನೇ ವಿಡಿಯೋದಲ್ಲಿ ನಾನು ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುವುದಾಗಿ ಹೇಳಿದ್ದಾಳೆ.
ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಕೆಯಾಗಲಿದೆ ಅನ್ನುವುದನ್ನು ಸಂತ್ರಸ್ಥ ಯುವತಿ ಪರ ವಕೀಲ ಜಗದೀಶ್ ದೃಢಪಡಿಸಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ದೂರು ಸಲ್ಲಿಕೆಯಾಗಲಿದೆ ಅಂದಿದ್ದಾರೆ.
ಸಂತ್ರಸ್ಥ ಯುವತಿಯ ನಡೆ ನೋಡಿದರೆ ಪ್ರಕರಣ ಎಸ್ಐಟಿ ಮತ್ತು ಬೆಂಗಳೂರು ಪೊಲೀಸರಿಗೆ ಬಿಸಿ ತುಪ್ಪವಾಗುವ ಲಕ್ಷಣಗಳಿದೆ. ಈ ಹಿಂದೆ ತಮ್ಮ ಆಪ್ತ ನಾಗರಾಜ್ ಮೂಲಕ ರಮೇಶ್ ಜಾರಕಿಹೊಳಿ ದೂರು ಸಲ್ಲಿಸಿದ್ದರು. ಸದಾಶಿವನಗರದಲ್ಲಿ ಸಲ್ಲಿಕೆಯಾದ ದೂರಿನ ಆಧಾರದಲ್ಲಿ ಎಫ್ಐಆರ್ ಕೂಡಾ ದಾಖಲಾಗಿತ್ತು.

ಇದೀಗ ವಕೀಲರ ಮೂಲಕ ಸಂತ್ರಸ್ಥೆ ದೂರು ಸಲ್ಲಿಕೆ ಮಾಡಿದರೆ ರಮೇಶ್ ಜಾರಕಿಹೊಳಿ ವಿರುದ್ದ ಎಫ್ಐಆರ್ ದಾಖಲು ಮಾಡಬೇಕಾದ ಅನಿವಾರ್ಯತೆ ಪೊಲೀಸರದ್ದಾಗಿರುತ್ತದೆ.
ಈ ಹಿಂದೆ ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ಯಾಕಿಲ್ಲ ಅಂದಿದ್ದರು.
ಈ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಒಪ್ಪಿರಲಿಲ್ಲ. ಈ ಎಲ್ಲಾ ಬೆಳವಣಿಗೆ ನಂತರ ಸಿಡಿ ಪ್ರಕರಣದ ಆಟವೇ ಬದಲಾಗಿದೆ.
Discussion about this post