ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಇದೀಗ ಹೊಸ ಆಲ್ಬಂನೊಂದಿಗೆ ಬಂದಿದ್ದಾರೆ. ಸಲಿಗೆ ಹೆಚ್ಚಾಗಿ ಇತ್ತೀಚೆಗೆ ಟಚ್ಚಲ್ಲಿ ಜೇಂಜಿದೆ, ಮನಸು ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ ಅನ್ನೋ ಸಾಲಿನೊಂದಿಗೆ ಪ್ರಾರಂಭವಾಗುವ ಹಾಡಿಗೆ ಚಂದನ್ ಒಬ್ಬರೇ ಹೆಜ್ಜೆ ಹಾಕಿದ್ದಾರೆ.
ಚಂದನ್ ಅಭಿಮಾನಿಗಳು ನಿವೇದಿತಾ ಕೂಡಾ ಈ ಆಲ್ಬಂನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಹಾಗಾಗಿಲ್ಲ.
ಟೊರೆಂಟೋ, ನಯಾಗರ, ಕೆನಡಾ ಸೇರಿದಂತೆ ವಿದೇಶದ ರಮ್ಯ ತಾಣಗಳಲ್ಲಿ ಚಿತ್ರೀಕರಿಸಲಾಗಿರುವ ಆಲ್ಬಂ ಈಗಾಗಲೇ ಚಂದನ್ ಅವರ ಯು ಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿತ್ತು, ಚಿಂದಿ ಉಡಾಯಿಸಿದೆ. ನಿಖಿಲ್ ಜೋಷಿಯವರು ಬರೆದ ಸಾಹಿತ್ಯಕ್ಕ ಸಂಗೀತ ಸಂಯೋಜಿಸಿ ಚಂದನ್ ಶೆಟ್ಟಿ ಹೆಜ್ಜೆ ಹಾಕಿದ್ದಾರೆ,
ಶೆಟ್ಟಿಯವರ ಹಳೆಯ ಹಾಡುಗಳನ್ನು ಕೇಳಿ ಇಷ್ಟಪಟ್ಟವರಿಗೆ ಸಲಿಗೆ ಅಷ್ಟೊಂದು ಹಿಡಿಸಿಲ್ಲ. ಈ ನಡುನೆ ನಿವೇದಿತಾ ಗೌಡ ಗಂಡನ ಹೊಸ ಆಲ್ಬಂಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಇನ್ಸ್ಟಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಚಂದನ್ ಶೆಟ್ಟಿ ಕೂಡಾ ಇದೇ ವಿಡಿಯೋದಲ್ಲಿ ಪತ್ನಿಯೊಂದಿಗೆ ಹೆಜ್ಜೆ ಹಾಕಿದ್ದಾರೆ.
Discussion about this post