ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಗಾಗಿ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಇನೋವೇಟಿವ್ ಫಿಲ್ಮಂ ಸಿಟಿಯಲ್ಲಿ ಬಿಗ್ ಬಾಸ್ ಮನೆಗೆ ಫೈನಲ್ ಟಚ್ ನೀಡಲಾಗುತ್ತಿದೆ.
Xiaomi Redmi 7 ಮೊಬೈಲ್ ಗೆ ಕೇವಲ 371 ರೂಪಾಯಿ EMI
ಕಳೆದ ಬಿಗ್ ಬಾಸ್ ಕಾರ್ಯಕ್ರಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರಗೊಂಡ ಕಾರಣ ನಿರೀಕ್ಷಿತ ಟಿ.ಆರ್.ಪಿ ಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ಝೀ ಕನ್ನಡ TRP ಸಮರದಲ್ಲಿ ಮುನ್ನಡೆ ಸಾಧಿಸಿರುವ ಕಾರಣ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ನಂಬರ್ 1 ಪಟ್ಟಕ್ಕೆ ಏರಲು ಕಲರ್ಸ್ ವಾಹಿನಿ ಸಿದ್ದವಾಗುತ್ತಿದೆ. ಹೀಗಾಗಿ ಕಲರ್ಸ್ ಸೂಪರ್ ಬದಲಾಗಿ, ಕಲರ್ಸ್ ವಾಹಿನಿಯಲ್ಲೇ ಬಿಗ್ ಬಾಸ್ ಸರಣಿ 7 ಪ್ರಸಾರವಾಗಲಿದೆ.
Get upto 50% off on Expert Fabric Care
ಇನ್ನು ಈ ಬಾರಿ ಕಾಮನ್ ಮೆನ್ ಗಳಿಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನೋ ಎಂಟ್ರಿ, ಸಾಮಾನ್ಯ ಜನರು ಮನೆಯೊಳಗೆ ಅದೆಷ್ಟು ರಂಜಿಸಿದರೂ ವೀಕ್ಷಕರಿಗೆ ಅದು ಇಷ್ಟವಾಗುವುದಿಲ್ಲ. ಆದರೆ ಸೆಲೆಬ್ರೆಟಿಗಳು ಮನೆಯೊಳಗಡೆ ಏನೇ ಮಾಡಿದರೂ ಅದು TRP ಸರಕಾಗಿ ಪರಿವರ್ತಿತವಾಗುವ ಕಾರಣದಿಂದ ಈ ಬಾರಿ ಸೆಲೆಬ್ರೆಟಿಗಳು ಮಾತ್ರ ಸ್ಪರ್ಧಿಗಳಾಗಿರುತ್ತಾರೆ.
ಈ ನಡುವೆ ಬಿಗ್ ಬಾಸ್ ಗಾಗಿ ಭರ್ಜರಿ ಪ್ರೋಮೋ ಕೂಡಾ ಸಿದ್ದಗೊಳ್ಳುತ್ತಿದೆ. ಕಲರ್ಸ್ ಕನ್ನಡ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೋ ಮೇಕಿಂಗ್ ವಿಡಿಯೋಗೆ ಶೇರ್ ಮಾಡಿಕೊಂಡಿದ್ದು, ‘ಅಲ್ಲಿ ಪೂಜೆ ನಡೆಯಿತು. ಡಾಕ್ಟರ್ ಬಂದ್ರು, ಕಾಫಿ ವಿತ್ ಕಿಚ್ಚ ಕೂಡ ಆಗಿಹೋಯ್ತು! ಆದ್ರೆ ಅಲ್ಲಿ ನಡೆದಿದ್ದು ಏನು? ನಿಮಗೇನಾದ್ರೂ ಗೊತ್ತಾ?’ ಎಂದ್ಹೇಳಿ ಮತ್ತಷ್ಟು ಕುತೂಹಲ ಕೆರಳಿಸಲಾಗಿದೆ.
Discussion about this post