ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ವುಹಾನ್ ನಗರವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಅಲ್ಲಿ ನೆಲೆಸಿರುವ ತಮ್ಮ ದೇಶದ ನಾಗರಿಕರ ರಕ್ಷಣೆಗೆ ಅಮೆರಿಕಾ, ಜಪಾನ್ ದೇಶಗಳು ಧಾವಿಸಿವೆ. ವುಹಾನ್ ನಿಂದ ತಮ್ಮ ನಾಗರೀಕರನ್ನು ತೆರವುಗೊಳಿಸಲು ಚೀನಾಕ್ಕೆ ವಿಶೇಷ ವಿಮಾನವನ್ನು ಕಳುಹಿಸಿಕೊಟ್ಟಿವೆ.
ಈ ನಡುವೆ ಭಾರತ ಕೂಡಾ ಭಾರತೀಯ ರಕ್ಷಣೆಗೆ ಮುಂದಾಗಿದೆ. ಮಾರಕ ಕೊರೋನಾ ವೈರಸ್’ನ ಕೇಂದ್ರ ಸ್ಥಳವಾಗಿರುವ ಚೀನಾದ ವುಹಾನ್ ನಗರದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ತೆರವುಗೊಳಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ವಿದೇಶಾಂಗ ಸಚಿವಾಲಯ ಭಾರತೀಯರ ತೆರವು ಕಾರ್ಯಾಚರಣೆ ಕೋರಿ ಚೀನಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ. ಇದಕ್ಕಾಗಿ ಏರ್ ಇಂಡಿಯಾ ವಿಮಾನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
Discussion about this post