ಸಾಧನೆಗಳ ಸರದಾರ, ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿಯ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನಕ್ಕೆ ದೇಶ ಕಂಬನಿ ಮಿಡಿಯುತ್ತಿದೆ. ಭಾರತ ಕೀರ್ತಿ ಪತಾಕೆಯನ್ನು ಅವರು ಹಾರಿಸಿದ ಎತ್ತರವನ್ನೂ ದೇಶ ಎಂದಿಗೂ ಮರೆಯುವುದಿಲ್ಲ.
ಮಿಲ್ಖಾ ಸಿಂಗ್ ಸಾವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎರಡೆರೆಡು ಟ್ವೀಟ್ ಮೋದಿ ರಾಷ್ಟ್ರದ ಕಲ್ಪನೆಯನ್ನು ಸೆರೆಹಿಡಿದು ಅಸಂಖ್ಯಾತ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ ಶ್ರೇಷ್ಠ ಕ್ರೀಡಾಪಟುವನ್ನು ನಾವು ಕಳೆದುಕೊಂಡಿದ್ದೇವೆ. ಅವರ ಸ್ಪೂರ್ತಿದಾಯಕ ವ್ಯಕ್ತಿತ್ವವು ಅವರನ್ನು ಲಕ್ಷಾಂತರ ಅಭಿಮಾನಿಗಳಿಗೆ ಪ್ರಿಯರನ್ನಾಗಿ ಮಾಡಿತ್ತು. ಅವರ ಸಾವಿನಿಂದ ನನಗೆ ತೀವ್ರ ನೋವಾಗಿದೆ ಅಂದಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಕೆಲವೇ ದಿನಗಳ ಹಿಂದೆ ನಾನು ಮಿಲ್ಖಾ ಸಿಂಗ್ ಜಿ ಅವರೊಂದಿಗೆ ಮಾತನಾಡಿದ್ದೆ. ಆಗ, ಇದು ನಮ್ಮ ಕೊನೆಯ ಸಂಭಾಷಣೆ ಎಂದು ತಿಳಿದಿರಲಿಲ್ಲ. ಅನೇಕ ಕ್ರೀಡಾಪಟುಗಳು ಮಿಲ್ಖಾ ಅವರ ಜೀವನ ಪ್ರಯಾಣದಿಂದ ಸ್ಪೂರ್ತಿ ಪಡೆಯುತ್ತಾರೆ. ಅವರ ಕುಟುಂಬಕ್ಕೆ ಮತ್ತು ಪ್ರಪಂಚದಾದ್ಯಂತ ಇರುವ ಅವರ ಅನೇಕ ಅಭಿಮಾನಿಗಳಿಗೆ ನಾನು ಸಂತಾಪ ಸೂಚಿಸುತ್ತಿದ್ದೇನೆ ಅಂದಿದ್ದಾರೆ.
ಮಿಲ್ಖಾ ಅವರು ನಾಲ್ಕು ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು ಹಾಗೂ 1958 ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಆಗಿದ್ದರು.ರೆ 1960 ರ ರೋಮ್ ಒಲಿಂಪಿಕ್ಸ್ನ 400 ಮೀಟರ್ ಫೈನಲ್ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ ನಾಲ್ಕನೇ ಸ್ಥಾನದೊಂದಿಗೆ ಅಂತ್ಯಗೊಂಡಿತು.
1998 ರಲ್ಲಿ ಪರಮ್ಜೀತ್ ಸಿಂಗ್ ಅದನ್ನು ಮುರಿಯುವವರೆಗೂ ಇಟಾಲಿಯನ್ ರಾಜಧಾನಿಯಲ್ಲಿ ಅವರು ಮಾಡಿದ ದಾಖಲೆ 38 ವರ್ಷಗಳ ಕಾಲ ರಾಷ್ಟ್ರೀಯ ದಾಖಲೆಯಾಗಿತ್ತು.
1956 ಮತ್ತು 1964 ರ ಒಲಿಂಪಿಕ್ಸ್ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು ಮತ್ತು 1959 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
Discussion about this post