ಭಾನುವಾರದ ವಿಶ್ವಕಪ್ ಟೂರ್ನಿಯ ಭಾರತ ಪಾಕಿಸ್ತಾನ ಪಂದ್ಯದಲ್ಲಿ ಪಾಕ್ ಆಟಗಾರ ಸರ್ಫರಾಜ್ ಆಕಳಿಸಿರುವ ವಿಡಿಯೋ ವೈರಲ್ ಆಗಲಾರಂಭಿಸಿದೆ.
ಮ್ಯಾಂಚೆಸ್ಟರ್ ನಲ್ಲಿ ವಾತಾವರಣ ಹಿತಕರವಾಗಿದೆ. ಎರಡು ಪ್ಲೇಟ್ ಬಿರಿಯಾನಿ ತಿಂದ ನಂತ್ರದ ಪ್ರತಿಕ್ರಿಯೆ ಇದು ಎಂದು ಒಬ್ಬರು ಕಾಲೆಳೆದ್ರೆ, ಮತ್ತೊಬ್ಬರು ತಂಡವನ್ನು ಸಂಘಟಿತ ಪ್ರದರ್ಶನಕ್ಕೆ ಹುರಿದುಂಬಿಸಬೇಕಿದ್ದ ಪಾಕ್ ನಾಯಕ ಮಾತ್ರ ನಿದ್ದೆಯ ಮಂಪರಿನಲ್ಲಿರುವುದು ಕಂಡು ಬಂದಿದೆ ಅಂದಿದ್ದಾರೆ. ಇನ್ನೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ‘ಸ್ವಂತ ಪಾಕಿಸ್ತಾನದ ನಾಯಕನಿಗೆ ತಮ್ಮ ತಂಡದ ಪ್ರದರ್ಶನ ಬೋರ್ ಹೊಡೆಸಿದೆ. ಹೀಗಾಗಿ ನಿದ್ದೆಗೆ ಆವರಿಸಿಕೊಂಡಿದೆ ಅಂದಿದ್ದಾರೆ.
ಅತ್ತ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಪ್ರತಿಯೊಂದು ಹಂತದಲ್ಲೂ ರಣತಂತ್ರ ರೂಪಿಸಬೇಕಿದ್ದ ನಾಯಕ ನಿದ್ದೆಯ ಅಲೆಯಲ್ಲಿ ತೇಲಿರುವುದು ಈಗ ಪಾಕಿಸ್ತಾನದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Discussion about this post