ದೇಶದಲ್ಲಿ ಅಪರೂಪ ಅನ್ನುವ ಎ-ನೆಕ್ (Acute nectrotizing encephalopathy of childhood Multisystem inflammatory syndrome in children) ಎಂಬ ಕಾಯಿಲೆ ದಾವಣಗೆರೆಯಲ್ಲಿ ಪತ್ತೆಯಾಗಿದೆ.
ಈ ಹಿಂದೆ ಈ ಕಾಯಿಲೆ ಕೇವಲ ವಯಸ್ಕರಲ್ಲಿ ಮಾತ್ರ ಕಂಡು ಬರುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಕೊರೋನಾ ಗೆದ್ದ ಮಗುವಿನಲ್ಲಿ ಈ ಸೋಂಕು ಕಂಡು ಬಂದಿರುವುದು ಆತಂಕ ಹುಟ್ಟು ಹಾಕಿದೆ.
ಪ್ರಸ್ತುತ ಮಗುವಿಗೆ ದಾವಣಗೆರೆ ನಗರದ ಎಸ್.ಎಸ್. ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಸ್.ಎಸ್.ವೈದ್ಯಕೀಯ ನಿರ್ದೇಶಕ ಡಾ.ನಿಜಲಿಂಗಪ್ಪ ಕಾಳಪ್ಪನವರು ಈ ಬಗ್ಗೆ ಮಾಹಿತಿ ನೀಡಿದ್ದು, ಇಂಥ ಪ್ರಕರಣಗಳಲ್ಲಿ ಶೇ 60ರಷ್ಟು ಸಾವಿನ ಸಾಧ್ಯತೆ ಇದೆ. ಇಂಥ ಒಂದು ವಯಸ್ಕರ ಪ್ರಕರಣ ದೆಹಲಿ ಏಮ್ಸ್ನಲ್ಲಿ ಪತ್ತೆ ಆಗಿತ್ತು. ಆದ್ರೆ ಮಗುವಿನಲ್ಲಿ ಕಂಡು ಬಂದಿರುವುದು ದೇಶದಲ್ಲಿ ಇದೇ ಮೊದಲು ಅಂದಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಮೂಲದ 13 ವರ್ಷದ ಮಗುವಿನಲ್ಲಿ ಇಂತಹ ಲಕ್ಷಣಗಳು ಕಂಡು ಬಂದಿದ್ದು, ಈ ಮಗು ಈಗ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಹಿಮೊನೋಗ್ಲೋಬಿನ್ ಔಷಧಿ ನೀಡಿದರೆ ಚೇತರಿಕೆಯಾಗುತ್ತದೆ. ಆದ್ರೆ ಹಿಮೊನೋಗ್ಲೋಬಿನ್ ಔಷಧಿ ದುಬಾರಿಯಾಗಿದ್ದು, 30ಕೆಜಿ ಮಗುವಿಗೆ ಕನಿಷ್ಠ 75 ಸಾವಿರದಿಂದ ಒಂದು ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.
Discussion about this post