ದಾವಣಗೆರೆ : ಮಕ್ಕಳ ಜೊತೆ ಆಟವಾಡುತ್ತಿದ್ದ ವೇಳೆ ಗಾಜಿನ ಗೋಲಿ ನುಂಗಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮೃತ ಮಗುವನ್ನು ಮನ್ವೀರ್ ಎಂದು ಗುರುತಿಸಲಾಗಿದೆ. ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಮನ್ವೀತ್ ಗೋಲಿ ನುಂಗಿದ್ದಾನೆ. ಜೊತೆಗಿದ್ದ ಮಕ್ಕಳು ಪೋಷಕರ ಗಮನಕ್ಕೆ ತರುವಷ್ಟು ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು.

ಮಂಗಳವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ವಿಷಯ ಗೊತ್ತಾದ ತಕ್ಷಣ ಪೋಷಕರು ಮಗುವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ ಅಷ್ಟು ಹೊತ್ತಿಗೆ 10 ರಿಂದ 15 ನಿಮಿಷ ಕಳೆದು ಹೋಗಿತ್ತು. ಹೀಗಾಗಿ ಮಗು ಉಸಿರು ಚೆಲ್ಲಿದೆ. ಇದೀಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Discussion about this post