ಬೆಂಗಳೂರು : ಡೆಲ್ಟಾ ಪ್ಲಸ್ ವೈರಸ್ ಸೋಂಕಿತರನೊಬ್ಬ ಇದೀಗ ತಲೆಮರೆಸಿಕೊಂಡಿರುವುದು ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದೆ. ಮಾಮೂಲಿ ಕೊರೋನಾ ವೈರಸ್ ಸೋಂಕಿತನಾಗಿದ್ರೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಸಿಕ್ಕಾಪಟ್ಟೆ ವೇಗದಲ್ಲಿ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಬಲ್ಲ ಡೆಲ್ಟಾ ಪ್ಲಸ್ ಸೋಂಕಿತನಾಗಿರುವುದೇ ಆತಂಕಕ್ಕೆ ಕಾರಣವಾಗಿದೆ.
ಬೊಮ್ಮಹಳ್ಳಿಯ 29 ವರ್ಷದ ಯುವಕನಿಗೆ ಜುಲೈ 14 ರಂದು ಸೋಂಕು ಇರುವುದು ಗೊತ್ತಾಗಿದ್ದು, ಬಳಿಕ ಈ ಸೋಂಕಿತರ ಪ್ರಥಮ ಹಾಗೂ ದ್ವೀತಿಯ ಸಂಪರ್ಕಿತರನ್ನು ಪತ್ತೆ ಮಾಡಿ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದೃಷ್ಟ ಅಂದ್ರೆ 7 ಪ್ರಾಥಮಿಕ ಸೋಂಕಿತರು ಹಾಗೂ 15 ದ್ವೀತಿಯ ಸೋಂಕಿತರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ : ಮಂಗಳೂರಿನಲ್ಲಿ ಕೊರೋನಾ ರೂಪಾಂತರಿ ಇಟಾ ( eta ) ವೈರಸ್ ಪತ್ತೆ : ಆತಂಕದಲ್ಲಿ ಕರಾವಳಿ
ಈ ನಡುವೆ ಬೊಮ್ಮಹಳ್ಳಿಯ ಯುವಕನಿಗೆ ಡೆಲ್ಟಾ ಪ್ಲಸ್ ವೈರಸ್ ತಗುಲಿದೆ ಅನ್ನುವ ಲ್ಯಾಬ್ ರಿಪೋರ್ಟ್ ಬಂದಿದೆ. ಹೀಗಾಗಿ ಒಂದಿಷ್ಟು ಹೆಚ್ಚು ಕಾಳಜಿ ವಹಿಸುವ ಸಲುವಾಗಿ ಬಿಬಿಎಂಪಿ ಅಧಿಕಾರಿಗಳು ಯುವಕನಿಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್. ಕೊಟ್ಟಿರುವ ವಿಳಾಸಕ್ಕೆ ಹೋದ್ರೆ ಅದು ರಾಂಗ್ ಆಡ್ರೆಸ್. ಹೀಗಾಗಿ ಸೋಂಕಿತನ ಮನೆಯ 100 ಮೀಟರ್ ಕಂಟೈನ್ಮೆಂಟ್ ಝೋನ್ ನಿರ್ಮಾಣ, ಯುವಕನ ವಲಯ ವ್ಯಾಪ್ತಿಯಲ್ಲಿ ಕೊರೋನಾ ಪರೀಕ್ಷೆ ಸಾಧ್ಯವಾಗಿಲ್ಲ. ಹೀಗಾಗಿ ಇದೀಗ ಯುವಕನ ಪತ್ತೆಗಾಗಿ ಪೊಲೀಸರ ಸಹಕಾರವನ್ನು ಬಿಬಿಎಂಪಿ ಕೇಳಿದೆ.
ಈ ಇನ್ನು ಡೆಲ್ಟಾ ವೈರಸ್ ಪತ್ತೆ ಕುರಿತಂತೆ ಮಾತನಾಡಿರುವ ಬೆಂಗಳೂರು ವಿಶೇಷ ಆಯುಕ್ತ ಡಿ ರಂದೀಪ್, ಈ ಹಿಂದೆ ನಂದಿನಿ ಬಡಾವಣೆಯ ಇಬ್ಬರು ಸೋಂಕಿತರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿತ್ತು. ಈಗ ಅವರೆಲ್ಲಾ ಗುಣಮುಖರಾಗಿದ್ದಾರೆ ಅಂದಿದ್ದಾರೆ.
Discussion about this post