ನವದೆಹಲಿ : ಇನ್ನೊಂದಿಷ್ಟು ದಿನ ಕಳೆದರೆ ದೇಶದಲ್ಲಿ ಮೂರನೇ ಅಲೆಯ ಅಬ್ಬರ ಕಾಣಿಸಿಕೊಳ್ಳುವುದು ಖಚಿತ. ಜನರ ನಿರ್ಲಕ್ಷ್ಯ ಹಾಗೂ ಕೆಲ ಸ್ವಯಂ ಘೋಷಿತ ತಜ್ಞರು ದಾರಿ ತಪ್ಪಿಸಿದ ಕಾರಣಕ್ಕೆ ಜನ ಮಾಸ್ಕ್ ಮರೆತು ಬೀದಿಗಿಳಿದಿದ್ದಾರೆ. ಒಂದ್ಸಲ ಕೊರೋನಾ ಬಂದವರಿಗೆ ಮತ್ತೊಮ್ಮೆ ಕೊರೋನಾ ಬರುವುದಿಲ್ಲ ಎಂದು ಹೇಳುವ ಸ್ವಯಂ ಘೋಷಿತ ತಜ್ಞರೇ ವುಹಾನ್ ವೈರಸ್ ಗಿಂತ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ.
ಈ ನಡುವೆ ದೆಹಲಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಪರೀಕ್ಷೆಗೆಂದು ಕಳುಹಿಸಿದ ಕನಿಷ್ಠ ಶೇ 80 ರಷ್ಟು ಮಾದರಿಗಳಲ್ಲಿ ಕೊರೊನಾವೈರಸ್ನ ಡೆಲ್ಟಾ ರೂಪಾಂತರ ಪತ್ತೆಯಾಗಿದೆಯಂತೆ. ಜುಲೈನಲ್ಲಿ ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಿದ ಮಾದರಿಗಳ ಪೈಕಿ ಶೇ 83.3ರಷ್ಟು ಮಾದರಿಗಳಲ್ಲಿ ಡೆಲ್ಟಾ ರೂಪಾಂತರ (B.1.617.2) ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಮೇ ತಿಂಗಳಲ್ಲಿ ಶೇ 81.7 ಹಾಗೂ ಜೂನ್ನಲ್ಲಿ 88.6 ರಷ್ಟು ಮಾದರಿಗಳಲ್ಲಿ ಡೆಲ್ಟಾ ರೂಪಾಂತರಿ ಕಂಡು ಬಂದಿದೆ.
ದೇಶದಲ್ಲಿ ಡಿಸೆಂಬರ್ 2020ರಲ್ಲಿ ಕಂಡು ಬಂದ ಡೆಲ್ಟಾ ರೂಪಾಂತರಿ ವೈರಸ್ ಪ್ರಸ್ತುತ 95ಕ್ಕೂ ಹೆಚ್ಚು ದೇಶಗಳಲ್ಲಿ ಕಂಡು ಬಂದಿದೆ. ಈ ನಡುವೆ ಕರ್ನಾಟಕದಲ್ಲೂ ಕೆಲ ರೂಪಾಂತರಿ ವೈರಸ್ ಅಬ್ಬರ ನಿಧಾನವಾಗಿ ಏರುತ್ತಿದೆ.

Discussion about this post