ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟನೆಯ ನಾತಿಚರಾಮಿ ಚಿತ್ರದ ನಿರ್ದೇಶಕ ಮಂಸೋರೆ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಇಂದು ಬೆಳಗಿನ ಜಾವ 5.30ರಿಂದ 6.30ರವರೆಗಿನ ಶುಭ ಮುಹೂರ್ತದಲ್ಲಿ ಅಖಿಲಾಗೆ ಮಂಸೋರೆ ತಾಳಿ ಕಟ್ಟಿದ್ದಾರೆ..
ಬೆಂಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಅವರ ವಿವಾಹ ಸಮಾರಂಭ ನೆರವೇರಿದ್ದು. ಕೊರೋನಾ ನಿಯಮಗಳ ಹಿನ್ನೆಲೆಯಲ್ಲಿ ಸ್ನೇಹಿತರು, ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನು ಮಂಸೋರೆ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಸೋರೆ ನಿರ್ದೇಶಿಸಿದ ಮೊದಲ ಸಿನಿಮಾ ಹರಿವು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತ್ತು. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿದ್ದ ನಾತಿಚರಾಮಿ ಚಿತ್ರಕ್ಕೂ ಮಂಸೋರೆ ನಿರ್ದೇಶನ ಮಾಡಿದರು.

ಅಂದ ಹಾಗೇ ಅಖಿಲಾ ಮಂಸೋರೆ ಅವರಿಗೆ ಬಹುಕಾಲದ ಗೆಳೆತಿ ಅನ್ನಲಾಗಿದೆ.

Discussion about this post