ಬೆಂಗಳೂರು : ಚಿರು ಸರ್ಜಾ-ಮೇಘನಾ ರಾಜ್ ಪುತ್ರನ ನಾಮಕರಣ ಸಂಭ್ರಮ ಬೆಂಗಳೂರಿನಲ್ಲಿ ನಡೆದಿದ್ದು, ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ನಾಮಕರಣ ವಿಧಿ ವಿಧಾನಗಳು ನೆರವೇರಿದೆ. ರಾಯನ್ ರಾಜ್ ಸರ್ಜಾ ಎಂದು ಪುತ್ರನಿಗೆ ಹೆಸರಿಟ್ಟಿರುವ ಮೇಘನಾ, ಮಗನ ಹೆಸರಿನ ಅರ್ಥವೇನು ಅನ್ನುವುದನ್ನು ಕೂಡಾ ವಿವರಿಸಿದ್ದಾರೆ.
ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೊಟೆಲ್ ನಲ್ಲಿ ನಾಮಕರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ಸರ್ಜಾ ಹಾಗೂ ಮೇಘನಾ ರಾಜ್ ಕುಟಂಬದವರು ಭಾಗಿಯಾಗಿದ್ದರು.

ಮೇಘನಾ ರಾಜ್ ಅವರು ಮಗನಿಗೆ ರಾಯನ್ ಎಂದು ಹೆಸರಿಟ್ಟಿದ್ದಾರೆ. ರಾಯನ್ ಅಂದ್ರೆ ಸಂಸ್ಕೃತದಲ್ಲಿ ರಾಯನ್ ಎಂದರೆ ಯುವರಾಜ ಎಂದರ್ಥ.
Discussion about this post