ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಯೂರೋ ಕಪ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಅವರು ಯೂರೋ ಇತಿಹಾಸದಲ್ಲಿ ಅತೀ ಹೆಚ್ಚು ಗೋಲ್ ಬಾರಿಸಿದ ಸಾರ್ವಕಾಲಿಕ ಆಟಗಾರನಾಗಿ ರೊನಾಲ್ಡೋ ಹೊರ ಹೊಮ್ಮಿದ್ದಾರೆ.
ಹಂಗೆರಿಯ ಬುಡಾಪೆಸ್ಟ್ನಲ್ಲಿರುವ ಪುಸ್ಕಸ್ ಅರೆನಾದಲ್ಲಿ ಮಂಗಳವಾರ ನಡೆದ ಯೂರೋ 2020 ಗ್ರೂಪ್ ‘ಎಫ್’ ಪ್ರಾರಂಭಿಕ ಪಂದ್ಯದಲ್ಲಿ ಹಂಗೇರಿ ವಿರುದ್ಧ ಪೋರ್ಚುಗಲ್ 3-0ಯ ಜಯ ದಾಖಲಿಸಿತ್ತು.
ಈ ಪಂದ್ಯದಲ್ಲಿ 11 ಗೋಲುಗಳನ್ನು ಬಾರಿಸಿರುವ ರೊನಾಲ್ಡೋ ತಂಡ ಗೆಲುವಿಗೆ ಕಾರಣಕರ್ತರಾಗಿದ್ದರು.
ಈ ಪಂದ್ಯಕ್ಕೂ ಮುನ್ನ ರೊನಾಲ್ಡೋ, 9 ಗೋಲ್ಗಳೊಂದಿಗೆ ಫ್ರೆಂಚ್ ಮಾಜಿ ಆಟಗಾರ ಮೈಕೆಲ್ ಪ್ಲಾಟಿನಿ ಜೊತೆಗೆ ದಾಖಲೆ ಸರಿದೂಗಿಸಿಕೊಂಡಿದ್ದರು.
Discussion about this post