ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ 1983ರ ವಿಶ್ವ ಕಪ್ ವಿಜೇತ ತಂಡದ ಸದಸ್ಯರಾಗಿದ್ದ ಯಶ್ ಪಾಲ್ ಶರ್ಮಾ ನಿಧನರಾಗಿದ್ದಾರೆ. ಮಂಗಳವಾರ ಹೃದಯಾಘಾತಕ್ಕೆ ಒಳಗಾದ ಅವರಿಗೆ 66 ವರ್ಷ ವಯಸ್ಸಾಗಿತ್ತು
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದ ಯಶ್ ಪಾಲ್ ಶರ್ಮಾ, ಭಾರತದ ಪರ 37 ಟೆಸ್ಟ್ ಪಂದ್ಯ ಗಳನ್ನಾಡಿದ್ದಾರೆ. 1978ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಯಶ್ ಪಾಲ್ ಶರ್ಮಾ, 1979ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದರು.
ಈ ಬಗ್ಗೆ ಖ್ಯಾತ ಪತ್ರಕರ್ತ ರಜತ್ ಶರ್ಮಾ ಟ್ವೀಟ್ ಮಾಡಿದ್ದು, ಹಲವಾರು ವರ್ಷಗಳಿಂದ ಅವರು ಇಂಡಿಯಾ ಟಿವಿ ಜೊತೆ ಕ್ರೀಡಾ ವಿಶ್ವೇಷಕರಾಗಿ ಗುರುತಿಸಿಕೊಂಡಿದ್ದರು.
70 ಹಾಗೂ 80ರ ದಶಕದಲ್ಲಿ ಕ್ರಿಕೆಟ್ ವೃತ್ತಿಜೀವನದಲ್ಲಿ ಮಿಂಚಿದ್ದ ಮಾಜಿ ಪಂಜಾಬ್ ಆಟಗಾರ, ಆಗಸ್ಟ್ 11, 1954ರಲ್ಲಿ ಲೂದಿಯಾನದಲ್ಲಿ ಜನಿಸಿದ್ದರು.
Discussion about this post