ಮುಂಬೈ : ಕೆಲ ಸಿನಿಮಾ ಮತ್ತು ವೆಬ್ ಸೀರಿಸ್ ಗಳಲ್ಲಿ ನಟಿಸಿರುವ ನಟಿಯೊಬ್ಬಳ ಹೆಸರು ಇದೀಗ ಪೋನ್ ವಿಡಿಯೋ ದಂಧೆಯಲ್ಲಿ ಕೇಳಿ ಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟಿ ಗೆಹನಾ ವಸಿಷ್ಠರನ್ನು ಬಂಧಿಸಿದ್ದಾರೆ.

ಮುಂಬೈ ಅಪರಾಧ ವಿಭಾಗದ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದು, ನೀಲಿ ಚಿತ್ರಗಳನ್ನು ಶೂಟ್ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುತ್ತಿದ್ದರು ಅನ್ನುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಗೆಹನಾ ವಸಿಷ್ಠ ಆಲಿಯಾಸ್ ವಂದನಾ ತಿವಾರಿ ಬಂಧನವನ್ನು ಪೊಲೀಸರು ದೃಢಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ 87 ಅಶ್ಲೀಲ ವಿಡಿಯೋಗಳನ್ನು ಆಕೆ ತನ್ನ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದು ಮೂರು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದ್ದು ಅದರಲ್ಲಿ 36 ಲಕ್ಷ ಹಣವಿರುವುದು ಗೊತ್ತಾಗಿದೆ ಅಂದಿದ್ದಾರೆ.
ಆದರೆ ವಂದನಾ ತಿವಾರಿಯವರ ಪ್ರೊಡಕ್ಷನ್ ಹೌಸ್ ಪೊಲೀಸರ ಆರೋಪವನ್ನು ತಳ್ಳಿ ಹಾಕಿದ್ದು, ಆರೋಪಗಳ ಕುರಿತಂತೆ ನ್ಯಾಯಾಲಯದಲ್ಲೇ ಉತ್ತರಿಸುವುದಾಗಿ ಹೇಳಿದೆ.
Discussion about this post