ಬೆಂಗಳೂರು : ಕೆಲ ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಮೂರು ದಿನಗಳ ಕಾಲ ಯಥಾ ಸ್ಥಿತಿಯನ್ನು ಕಾಯ್ದುಗೊಂಡಿತ್ತು. ಇದಾದ ಬಳಿಕ ಮಂಗಳವಾರ ಮತ್ತೆ ಇಳಿಕೆಯಾಗಿದ್ದ ಚಿನ್ನದ ದರ ಬುಧವಾರ ದೊಡ್ಡ ಜಿಗಿತ ಕಂಡಿದೆ.
ಜುಲೈ 27 ರಂದು 22 ಕ್ಯಾರೆಟ್ ನ 10 ಗ್ರಾಮ್ ಚಿನ್ನಕ್ಕೆ 46,660 ರೂಪಾಯಿ ಇದ್ರೆ, ಜುಲೈ 28 ರಂದು 46,840ಕ್ಕೆ ಏರಿದೆ. ಇನ್ನು 24 ಕ್ಯಾರೆಟ್ ಚಿನ್ನದ ದರಕ್ಕೆ ಬರುವುದಾದ್ರೆ 10 ಗ್ರಾಮ್ ಚಿನ್ನಕ್ಕೆ 47,660 ಇದ್ದ ದರ ಇಂದು 47,840ಕ್ಕೆ ಏರಿದೆ.

ಕರ್ನಾಟಕದಲ್ಲಿ ಇಂದು 22 ಕ್ಯಾರೆಟ್ ಚಿನ್ನಕ್ಕೆ 44,800 ಹಾಗೂ 24 ಕ್ಯಾರೆಟ್ ಚಿನ್ನಕ್ಕೆ48,880 ದರವಿದ್ದು, ಆಷಾಢದಲ್ಲಿ ಚಿನ್ನದ ದರ ಇಳಿಕೆಯಾಗಬಹುದು ಅನ್ನುವ ನಿರೀಕ್ಷೆ ಸುಳ್ಳಾಗಿದೆ. ಇನ್ನು ಬೆಳ್ಳಿ ದರವೂ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ.

Discussion about this post