ಗೋಲ್ಡನ್ ಸ್ಟಾರ್ ಗಣೇಶ್ ಬರ್ತಡೇಯಂದು ಮತ್ತೊಂದು ಮೆಗಾ ಸಿನಿಮಾ ಅನೌನ್ಸ್ ಆಗಿದೆ. ಈ ಮೂಲಕ ಪ್ರಶಾಂತ್ ರಾಜ್ ಮತ್ತು ಗೋಲ್ಡನ್ ಸ್ಟಾರ್ ಮೂರನೇ ಬಾರಿಗೆ ಒಂದಾಗುತ್ತಿದ್ದಾರೆ.
ಪ್ರಶಾಂತ್ ರಾಜ್ ಅವರ ನಿಮ್ಮ ಸಿನಿಮಾ” ನಿರ್ಮಾಣ ಸಂಸ್ಥೆಯ 10ನೇ ವರ್ಷಾಚರಣೆಯ ಸಂಭ್ರಮದಲ್ಲಿ ಸಿನಿಮಾ ಅನೌನ್ಸ್ ಆಗಿದ್ದು, ಜೂಮ್, ಆರೆಂಜ್ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳ ನಂತ್ರ ಮತ್ತೆ ಇಬ್ಬರೂ ಜೊತೆಯಾಗಿದ್ದಾರೆ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.

ಒಟ್ಟಿನಲ್ಲಿ ರೊಮ್ಯಾಂಟಿಕ್ ಕಾಮಿಡಿ ಕೊಟ್ಟು ಸಕ್ಸಸ್ ಆಗಿದ್ದ ಈ ಕಾಂಬೋ ಇದೀಗ ಡಾರ್ಕ್ ಕ್ರೈಂ ಎಂಟರ್ಟೈನ್ಮೆಂಟ್ ಕೊಡೋದಕ್ಕೆ ಸಜ್ಜಾಗಿದ್ದಾರೆ.
ಔಟ್ ಅಂಡ್ ಔಟ್ ಎಂಟರ್ಟೈನ್ಮೆಂಟ್ ಅಂತ ಹೇಳ್ತಿರೋ ಗಣಿ ಪ್ರಶಾಂತ್ ಮಸ್ತ್ ಮೋಜು ಮಸ್ತಿಯ ಮನರಂಜನೆ ಕೊಡೋದಾಗಿ ಈ ಮೂಲಕ ಕನ್ನಡ ಸಿನಿಪ್ರಿಯರಿಗೆ ಪ್ರಾಮಿಸ್ ಮಾಡಿದ್ದಾರೆ.

Discussion about this post