ವಿಕಾಸ್ ಬಹ್ಲ್ ನಿರ್ದೇಶಿಸುತ್ತಿರುವ ‘ಗುಡ್ಬೈ’ ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಚಿತ್ರದ ಮೊದಲ ಶೆಡ್ಯೂಲ್ ನ ಶೂಟಿಂಗ್ ಮುಕ್ತಾಯಗೊಂಡಿದ್ದು, ಈ ಹಿನ್ನಲೆಯಲ್ಲಿ ಚಿತ್ರತಂಡ wrap-up partyಯನ್ನು ಆಯೋಜಿಸಿತ್ತು.
ಪಾರ್ಟಿಯಲ್ಲಿ ಅಭಿತಾಬ್ ಬಚ್ಚನ್, ನೀನಾ ಗುಪ್ತಾ, ರಶ್ಮಿಕಾ ಮಂದಣ್ಣ, ನಟ ಪವೈಲ್ ಗುಲಾಟಿ ಸೇರಿದಂತೆ ಅನೇಕ ಕಲಾವಿದರು ಪಾಲ್ಗೊಂಡಿದ್ದರು.
ಪಾರ್ಟಿಯ ಫೋಟೋಗಳನ್ನು Pavail Gulati ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬೆವರು ಹರಿಸಿರುವುದು ಕಾಣಿಸಿದೆ.
ಈ ನಡುವೆ ರಶ್ಮಿಕಾ ಮಂದಣ್ಣ ‘ಗುಡ್ಬೈ’ ಮಾತ್ರವಲ್ಲದೇ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ಅವರು ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ‘ಮಿಷನ್ ಮಜ್ನು’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Discussion about this post