ಬೆಂಗಳೂರು : ನಿದ್ದೆಯಲ್ಲಿದ್ದ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಅದನ್ನು ಕೊಲೆ ಮಾಡಲು ಯತ್ನಿಸಿದ ಆರೋಪದಡಿಯಲ್ಲಿ ನಿವೃತ ಸಬ್ ಇನ್ಸ್ ಪೆಕ್ಟರ್ ಒಬ್ಬರ ಮೇಲೆ FIR ದಾಖಲಾಗಿದೆ.
ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಪಶು ವೈದ್ಯ ಡಾ. ರಮೇಶ್ ಕೊಟ್ಟಿರುವ ದೂರಿನಂತೆ ಹುಳಿ ಮಾವು ಠಾಣೆಯಲ್ಲಿ ನಿವೃತ ಸಬ್ ಇನ್ಸ್ ಪೆಕ್ಟರ್ ನಾಗೇಶ್ (65) ಅವರ ಮೇಲೆ FIR ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಇಂದ್ರಜಿತ್ ಲಂಕೇಶ್ ಗೆ ಕಾಡುತ್ತಿರುವ ಕೊರಗು ಅದ್ಯಾವುದು ಗೊತ್ತಾ….?
ಭಾನುವಾರ ನಾಗೇಶ್ ಅವರು ಕಾರು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬೀದಿ ನಾಯಿಯೊಂದು ಮಲಗಿತ್ತು. ಈ ವೇಳೆ ಹಾರ್ನ್ ಮಾಡಿದರೂ ನಾಯಿ ಎದ್ದಿರಲಿಲ್ಲ. ಹೀಗಾಗಿ ನಾಯಿ ಮೇಲೆಯೇ ನಾಗೇಶ್ ಕಾರು ಹಾಯಿಸಿದ್ದಾರೆ. ಪರಿಣಾಮ ನಾಯಿ ಗಂಭೀರವಾಗಿ ಗಾಯಗೊಂಡಿತ್ತು.
ಇದನ್ನೂ ಓದಿ : ಪದ್ಮ ಪ್ರಶಸ್ತಿಯ ಸಾಧಕರು – ರಾಜಕೀಯದಲ್ಲೂ ಸಕ್ರಿಯರಾಗಿರುವ 105ರ ಅಜ್ಜಿಗೆ ಪ್ರಶಸ್ತಿ ತಂದುಕೊಟ್ಟಿದ್ದು ಭೂತಾಯಿ
ಈ ದೃಶ್ಯಗಳು ಸಿಸಿಟಿವಿಯೊಂದರಲ್ಲಿ ಸೆರೆಯಾಗಿತ್ತು, ಬಳಿಕ ವೈರಲ್ ಕೂಡಾ ಆಗಿತ್ತು.
Discussion about this post