ಸಂಜನಾ ಗಲ್ರಾನಿ, ಗಂಡ ಹೆಂಡತಿ ಸಿನಿಮಾ ಮೂಲಕ ಚಂದನವನದಲ್ಲಿ ಸದ್ದು ಮಾಡಿದ್ದರು. ಬಳಿಕ ಗಲ್ರಾನಿ ಸಿನಿಮಾ ಮೂಲಕ ಸದ್ದು ಮಾಡಲಿಲ್ಲ. ಬದಲಾಗಿ ಮಾದಕ ವಸ್ತು ಜಾಲದಲ್ಲಿ ಆರೋಪಿಯಾಗಿ ಡೈಲಿ ಹೆಡ್ ಲೈನ್ ಆಗಿದ್ದರು. ಈ ವೇಳೆ ಅವರ ಮದುವೆ ಮತಾಂತರ ಅನೇಕ ವಿಚಾರಗಳು ಕೂಡಾ ಚರ್ಚೆಗೆ ಬಂದಿತ್ತು.
ಇದಾದ ಬಳಿಕ ಜೈಲಿನಿಂದ ಹೊರ ಬಂದವರು ತಮ್ಮ ಮದುವೆ ವಿಚಾರದ ಕುರಿತಾಗಿ ಹರಡಿದ್ದ ವಿಷಯಗಳಿಗೆ ಸ್ಪಷ್ಟನೆ ಕೊಟ್ಟರು. ಗಟ್ಟಿ ದನಿಯಲ್ಲಿ ಹೌದು ನಾನು ಮದುವೆಯಾಗಿದ್ದೇನೆ ಅಂದರು. ಜೊತೆಗೆ ಒಂದಿಷ್ಟು ಸಮಾಜ ಸೇವಾ ಚಟುವಟಿಕೆಯಲ್ಲೂ ತೊಡಗಿಕೊಂಡರು. ಇದೀಗ ಸಂಜನಾ ದಾಂಪತ್ಯ ಜೀವನದ ಬಗ್ಗೆ ಗಾಸಿಪ್ ಓಡಾಡುತ್ತಿದೆ. ಈ ಬಗ್ಗೆ ಅವರೇನೂ ಮಾತಾಡಿಲ್ಲ. ಅವೆಲ್ಲವೂ ಸುಳ್ಳಾಗಿರಲಿ ಅನ್ನುವುದು ನಮ್ಮ ಹಾರೈಕೆ.
Discussion about this post