ಮಧ್ಯಪ್ರದೇಶದ ಇಂದೋರ್ನಿಂದ ಸಂಚರಿಸುವ 39 ಮಾರ್ಗದ ರೈಲುಗಳಲ್ಲಿ ಪ್ರಯಾಣಿಕರ ಕಾಲು ಮತ್ತು ತಲೆಗೆ ಮಸಾಜ್ ಸೇವೆ ಕಲ್ಪಿಸುವ ಪ್ರಸ್ತಾಪಕ್ಕೆ ಬ್ರೇಕ್ ಬಿದ್ದಿದೆ.
ನಿರ್ಗಮಿತ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಬಿಜೆಪಿಯ ಕೆಲ ಸಂಸದರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರಸ್ತಾಪವನ್ನೇ ವಾಪಸ್ ಪಡೆದಿರುವುದಾಗಿ ಪಶ್ಚಿಮ ರೈಲ್ವೆ ಸ್ಪಷ್ಟ ಪಡಿಸಿದೆ.
ರೈಲಿನಲ್ಲಿ ಇನ್ಮುಂದೆ ಸಿಗಲಿದೆ ಮಸಾಜ್ ಸೇವೆ….!
ಈ ಬಗ್ಗೆ ಬಿಡುಗಡೆಯಾಗಿರುವ ಪತ್ರಿಕಾ ಹೇಳಿಕೆಯಲ್ಲಿ ಪಶ್ಚಿಮ ರೈಲ್ವೆ ವ್ಯಾಪ್ತಿಗೆ ಬರುವ ಇಂದೋರ್ ಮೂಲಕ ಸಂಚರಿಸುವ 39 ಮಾರ್ಗದ ರೈಲುಗಳಲ್ಲಿ ಪ್ರಯಾಣಿಕರಿಗೆ ತಲೆ ಮತ್ತು ಕಾಲು ಮಸಾಜು ಮಾಡುವ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಇದನ್ನು ಕೈಬಿಡಲಾಗಿದೆ ಎಂದು ಪಶ್ಚಿಮ ರೈಲ್ವೆ ವಿಭಾಗದ ಮುಖ್ಯ ವಕ್ತಾರ ರವೀಂದರ್ ಭಾಕರ್ ಹೇಳಿದ್ದಾರೆ.
Discussion about this post