ಬೆಂಗಳೂರು : ಚೈನಾ ವೈರಸ್ ಸೋಲಿಸುವ ನಿಟ್ಟಿನಲ್ಲಿ ಭಾರತದ ಸ್ವದೇಶಿ ಲಸಿಕೆ ಕೋವಾಕ್ಸಿನ್ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ.
ಭಾರತ್ ಬಯೋಟೆಕ್ ಸಂಸ್ಥೆಯ ಕೊಡುಗೆಯಾಗಿರುವ ಕೋವಾಕ್ಸಿನ್ ಈಗಾಗಲೇ ಭಾರತದ ಪಾಲಿಗೆ ಸಂಜೀವಿನಿಯಾಗಿದೆ. ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿಯವರೇ ಇದೇ ಸ್ವದೇಶಿ ಲಸಿಕೆಯನ್ನು ಸ್ವೀಕರಿಸುವ ಮೂಲಕ ಲಸಿಕೆ ಬಗೆಗಿನ ಹಲವು ಆತಂಕಗಳನ್ನು ದೂರ ಮಾಡಿದ್ದಾರೆ.
ಈ ನಡುವೆ ಕೋವಾಕ್ಸಿನ್ ಲಸಿಕೆಯನ್ನು ಸಂಶೋಧಿಸಿರುವ ಭಾರತ್ ಬಯೋ ಟೆಕ್ ಇದೀಗ ಇಂಟ್ರಾನಾಸಲ್ ವ್ಯಾಕ್ಸಿನ್ ಅನ್ನು ಕಂಡು ಹಿಡಿದಿದೆ.

ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮೂಗಿನ ಮೂಲಕ ಕೊಡುವ ಲಸಿಕೆ ಇದಾಗಿದ್ದು, ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಪ್ರಾರಂಭಗೊಂಡಿದೆ.
ಈಗಾಗಲೇ 10 ಜನ ಲಸಿಕೆಯನ್ನು ಪಡೆದುಕೊಂಡಿದ್ದು, ಕೆಲವೇ ದಿನಗಳಲ್ಲಿ ಪಾಟ್ನಾ, ಚೆನೈ ಮತ್ತು ನಾಗ್ಪುರದಲ್ಲಿ ಮತ್ತಷ್ಟು ಮಂದಿ ಲಸಿಕೆ ಪಡೆದುಕೊಳ್ಳಲಿದ್ದಾರೆ.

ಪ್ರಾಣಿಗಳ ಮೇಲೆ ನಡೆಸಲಾದ ಲಸಿಕಾ ಪರೀಕ್ಷಾ ಯಶಸ್ವಿಯಾದ ಹಿನ್ನಲೆಯಲ್ಲಿ, ಮೊದಲ ಹಂತದಲ್ಲಿ 175 ಮಂದಿಗೆ ಇಂಟ್ರಾನಾಸಲ್ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ.
ಈ ಸಂಶೋಧನೆ ಯಶಸ್ವಿಯಾದರೆ ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ.

Discussion about this post