ದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ISRO ) ಉಡಾವಣೆ ಮಾಡಿದ್ದ ಭೂ ಪರಿವೀಕ್ಷಣಾ ಉಪಗ್ರಹ ಇಒಎಸ್-3(EOS-3)ಯನ್ನು ಗುರುವಾರ ಬೆಳಗ್ಗೆ 5.43ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿದೆ. ಆದರೆ ಉದ್ದೇಶಿಸಿತ ಗುರಿಯನ್ನು ತಲುಪುವಲ್ಲಿ ವಿಫಲವಾಗಿದೆ.
ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು ಮೊದಲ ಹಾಗೂ ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿದೆ, ಆದರೆ ಕ್ರಯೋಜೆನಿಕ್‌ನಲ್ಲಿ ದೋಷ ಕಂಡುಬಂದಿದ್ದು ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಅಂದಿದೆ.
ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಜಿಎಸ್ಎಲ್ವಿ- ಎಫ್ 10 (GSLV-F10) ಮೂಲಕ ಹಾರಿದ ಉಪಗ್ರಹ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ. ಈ ಉಪಗ್ರಹ ಉಡಾವಣೆಗೆ ಹಿಂದೆಯೇ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ನಿಗದಿಯಂತೆ 2020ರ ಮಾರ್ಚ್ನಲ್ಲಿ ಇದು ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಮುಂದೂಡಲಾಗಿತ್ತು.

ಒಂದು ವೇಳೆ ಉಡಾವಣೆ ಯಶಸ್ವಿಯಾಗಿದ್ದರೆ ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂಚೆಯೇ ಗ್ರಹಿಸಬಹುದಾಗಿತ್ತು.
The GSLV-F10/EOS-03 lifted off lifted off from the Satish Dhawan Space Centre, Sriharikota at 5.43 am today after a 26-hour countdown.
Discussion about this post