ಅತ್ತ ಡಬ ಡಬ ಚಂದನ್ ಶೆಟ್ಟಿ ಸರ್ಕಾರಿ ದುಡ್ಡಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಿ ಸುದ್ದಿಯಾಗಿದ್ದಾನೆ.
ಸರ್ಕಾರಿ ದುಡ್ಡಿನಲ್ಲಿ ವೈಯುಕ್ತಿಕ ಜಾತ್ರೆ ನಡೆಸಿದ್ದರೂ ನಿವೇದಿತಾ ಮತ್ತು ಚಂದನ್ ನಾವು ತಪ್ಪು ಮಾಡಿಲ್ಲ ಅನ್ನುವಂತೆ ಪೋಸ್ ಕೊಡುತ್ತಿದ್ದಾರೆ.
ಈ ನಡುವೆ ಬಾಲಿವುಡ್ ನಟಿ ಎವೆಲಿನ್ ಶರ್ಮಾ ತನ್ನ ಬಹುಕಾಲದ ಗೆಳೆಯನೊಂದಿಗಿನ ಚುಂಬನದ ಫೋಟೋ ಹಂಚಿಕೊಳ್ಳುವ ಮೂಲಕ ತಾವು ಎಂಗೇಜ್ ಆಗಿರುವ ವಿಷಯವನ್ನು ತಿಳಿಸಿದ್ದಾರೆ.
ಎವೆಲಿನ್ ಶರ್ಮಾ ಆಸ್ಟ್ರೇಲಿಯಾದ ದಂತ ವೈದ್ಯ ತುಷಾನ್ ಭಿಂದಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ಇದೀಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ವಿಷಯವನ್ನು ಗೆಳೆಯನಿಗೆ ಕಿಸ್ ಮಾಡುತ್ತಿರುವ ಫೋಟೋ ಹಂಚಿಕೊಳ್ಳುವ ಮೂಲಕ ಎವೆಲಿನ್ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಎವೆಲಿನ್ ಸ್ನೇಹಿತರೊಬ್ಬರು ಕಳೆದ ವರ್ಷ ಆಯೋಜಿಸಿದ ಬ್ಲೈಂಡ್ ಡೇಟ್ನಲ್ಲಿ ಅವರಿಬ್ಬರ ಭೇಟಿಯಾಗಿತ್ತು. ಅಲ್ಲಿ ಪರಿಚಯವಾದ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು.
ಈ ಬಗ್ಗೆ ಮಾತನಾಡಿರುವ ಎವೆಲಿನ್ ತುಷಾನ್ ತುಂಬಾನೇ ರೊಮ್ಯಾಂಟಿಕ್ ಹಾಗೂ ನನ್ನಗಿಂತ ಹೆಚ್ಚಾಗಿ ಸಿನಿಮಾಗಳನ್ನು ನೋಡುತ್ತಾರೆ. ನಾವಿಬ್ಬರೂ ಪ್ರೀತಿಸಲು ನಿರ್ಧರಿಸಿದ ಮೇಲೆ ನಾವು ನಮ್ಮಿಬ್ಬರ ಕುಟುಂಬವನ್ನು ಪರಸ್ಪರ ಪರಿಚಯ ಮಾಡಿಸಿದ್ದೆವು. ಬಳಿಕ ನವರಾತ್ರಿಯ ಸಮಯದಲ್ಲಿ ನಿಶ್ಚಿತಾರ್ಥ ಮಾಡಲು ನಮ್ಮಿಬ್ಬರ ಕುಟುಂಬ ನಿರ್ಧರಿಸಿತು ಅಂದಿದ್ದಾರೆ.
ಎವೆಲಿನ್ 2012ರಲ್ಲಿ ‘ಫ್ರಂ ಸಿಡ್ನಿ ವಿತ್ ಲವ್’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ‘ಹೇ ಜವಾನಿ ಹೇ ದಿವಾನಿ’, ‘ನೌಟಂಕಿಸಾಲಾ’, ‘ಮೈ ತೇರಾ ಹೀರೋ’, ಯಾರಿಯನ್ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ ಪ್ರಭಾಸ್ ನಟನೆಯ ‘ಸಾಹೋ’ ಚಿತ್ರದಲ್ಲೂ ಎವೆಲಿನ್ ಅಭಿನಯಿಸಿದ್ದರು.
Discussion about this post