ಕಲಬುರಗಿ : ಸಹೋದರರಿಬ್ಬರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜೇರ್ವರ್ಗಿ ಅಂಕಲಗಿಯಲ್ಲಿ ಈ ದುರ್ಘಟನೆ ನಡೆದಿದೆ
ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಮೃತರನ್ನು ಯಲ್ಲಾಲಿಂಗ ಮತ್ತು ಗಂಗಣ್ಣ ಎಂದು ಗುರುತಿಸಲಾಗಿದೆ.ಹಳೇ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.
ನೆಲೋಗಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇವರಿಬ್ಬರನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈಯಲಾಗಿದೆ, ಕೊಲೆಗೆ ಕಾರಣ ಹಳೆ ದ್ವೇಷ ಎನ್ನಲಾಗಿದೆ.
ಯಲ್ಲಾಲಿಂಗ್ ಅವರ ರುಂಡವನ್ನು ಕತ್ತರಿಸಿರುವ ದುಷ್ಕರ್ಮಿಗಳು ಅದನ್ನು ಗಂಗಣ್ಣನ ಶವದ ಪಕ್ಕ ತಂದಿಟ್ಟಿದ್ದಾರೆ.
Discussion about this post