ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಡ್ರಗ್ಸ್ ಸೇರಿಸಿರುವುದು ದೃಢ ಪಟ್ಟಿದೆ. ಈ ಕುರಿತ ವರದಿ ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಕೈ ಸೇರಿದ್ದು, ಇದರಿಂದ ನಟಿ ಮಣಿಯರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಚಂದನವನದಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದರು. ಇದಾದ ಬಳಿಕ ಪ್ರಕರಣ ತಣ್ಣಗಾಗಿತ್ತು. ಇದೀಗ ಮತ್ತೆ ಪ್ರಕರಣ ಚಾಲ್ತಿಗೆ ಬಂದಿದ್ದು, ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಮಾದಕ ವಸ್ತು ಸೇವನೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ಸಂಜನ,ರಾಗಿಣಿ, ವಿರೇನ್ ಸೇರಿದಂತೆ ಅನೇಕರ ಮೂತ್ರ,ರಕ್ತ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ನಟಿಯೊಬ್ಬರು ಮೂತ್ರಕ್ಕೆ ನೀರು ಬೆರೆಸಿ ಸಿಸಿಬಿ ಪೊಲೀಸರನ್ನೇ ಬಕ್ರ ಮಾಡಲು ಹೋಗಿದ್ದರು.

ಈ ನಡುವೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ತಲೆಕೂದಲನ್ನು ಹೈದ್ರಬಾದ್ ನಲ್ಲಿರುವ FSLಗೆ ಕಳುಹಿಸಲಾಗಿತ್ತು. ಇದೀಗ FSL ವರದಿ ಸಿಸಿಬಿ ಪೊಲೀಸರ ಕೈ ಸೇರಿದ್ದು ರವಿಶಂಕರ್, ಲೂಮ್ ಪೆಪ್ಪರ್,ರಾಹುಲ್ ತೋನ್ಸ್ ಸ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.

ಈ ಮೂಲಕ ನಶೆ ಲೋಕದಲ್ಲಿ ಚಂದನವನದ ನಟಿಯರು ತೇಲಾಡಿದ್ದರು ಅನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ಹಾಗಾದ್ರೆ ಇವರ ಮೇಲೆ ಚಂದನವನದ ಮುಖಂಡರು ಕ್ರಮಕ್ಕೆ ಮುಂದಾಗುತ್ತಾರೆಯೇ?
Discussion about this post