ಬೆಂಗಳೂರು :ಗೋವಿಂದಪುರ ಡ್ರಗ್ಸ್ ಪ್ರಕರಣ ಸಂಬಂಧ ನಡೆದ ದಾಳಿಯಲ್ಲಿ ಈಗಾಗಲೇ ನಾಲ್ವರು ಆರೋಪಿಗಳು ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪೈಕಿ ಸೋನಿಯಾ ಮತ್ತು ಆಕೆಯ ಬಾಯ್ ಫ್ರೆಂಡ್ ದಿಲೀಪ್ ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಹೀಗಾಗಿ ಪೊಲೀಸರು ಅವರಿಬ್ಬರನ್ನೂ ಬಂಧಿಸಿದ್ದಾರೆ. ಜೊತೆಗೆ 5 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಡಿಜೆ ಚಿನ್ನಪ್ಪ ಹಾಗೂ ಹಾಗೂ ಉದ್ಯಮಿ ಭರತ್ ಮೆಡಿಕಲ್ ರಿಪೋರ್ಟ್ ಇನ್ನೂ ಪೊಲೀಸರ ಕೈ ಸೇರಿಲ್ಲ. ಹೀಗಾಗಿ ಅವರಿಬ್ಬರನ್ನೂ ಮಂಗಳವಾರ ವಿಚಾರಣೆ ನಡೆಸಿದ್ದ ಪೊಲೀಸರು ಡ್ರಗ್ಸ್ ಪೆಡ್ಲರ್ ಥಾಮಸ್ ನಂಟಿನ ಕುರಿತಂತೆ ವಿವರಣೆ ಕೇಳಿದ್ದಾರೆ. ಇಂದು ಮತ್ತೆ ಅವರಿಬ್ಬರನ್ನೂ ವಿಚಾರಣೆಗೆ ಕರೆದಿರುವ ಪೊಲೀಸರು ಮತ್ತಷ್ಟು ಡ್ರೀಲ್ ಮಾಡಲಿದ್ದಾರೆ. ಅಷ್ಟು ಹೊತ್ತಿಗೆ ಮೆಡಿಕಲ್ ರಿಪೋರ್ಟ್ ಕೈ ಸೇರಿ ಪಾಸಿಟಿವ್ ಎಂದು ಗೊತ್ತಾದ್ರೆ ಇಬ್ಬರನ್ನೂ ಪೊಲೀಸರು ಬಂಧಿಸುವ ಸಾಧ್ಯತೆಗಳಿದೆ

ಈ ನಡುವೆ ಪುರುಷರ್ ಟಾಯ್ಲೆಟ್ ನಲ್ಲಿ ಬಚ್ಚಿಟ್ಟು ಪೊಲೀಸರನ್ನು ಬಕ್ರ ಮಾಡಿದ ಸೋನಿಯಾ, ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ನಕ್ರ ಮಾಡಲಾರಂಭಿಸಿದ್ದಾಳೆ. ನಾನು ಡ್ರಗ್ಸ್ ಸೇವಿಸಿಯೇ ಇಲ್ಲ, ನನಗೆ ಥಾಮಸ್ ಯಾರು ಅಂತಾ ಗೊತ್ತೇ ಇಲ್ಲ ಎಂದು ಪಟ್ಟು ಹಿಡಿದಿದ್ದಾಳಂತೆ.
ಇನ್ನು ಇದೇ ಪ್ರಕರಣದಲ್ಲಿ ಕನ್ನಡ ಕೆಲ ನಟಿಯರ ಹೆಸರು, ಕೆಲ ರಾಜಕಾರಣಿಗಳ ಪುತ್ರರ ಹೆಸರು ಕೂಡಾ ಕೇಳಿ ಬಂದಿದೆ. ಹೀಗಾಗಿ ಪ್ರಭಾವಿ ಕುಳಗಳಿಗೆ ನೋಟೀಸ್ ಕೊಟ್ಟು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
Discussion about this post