ಬೆಂಗಳೂರು : ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಒಳ ಹೋಗ್ತಾರೆ ಎಂದು ಭಾವಿಸಲಾಗಿದ್ದ ನಟಿ ಕಾವ್ಯಗೌಡ ಬಿಗ್ ಬಾಸ್ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಗೊತ್ತಾಗಿದೆ.

ಇದಕ್ಕೆ ಕಾರಣ ಅವರ ಮದುವೆ ಕಾರ್ಯಕ್ರಮ ಅನ್ನುವುದು ಕೂಡಾ ತಿಳಿದು ಬಂದಿದೆ.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಚಾಟ್ ಕಾರ್ನರ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಕಾವ್ಯಗೌಡ, ಇದೇ ವರ್ಷ ನಾನು ಹಸಮಣೆ ತುಳಿಯಲಿದ್ದೇನೆ.

ಈಗಾಗಲೇ ಎರಡೂ ಮನೆಯಲ್ಲೂ ಸಿದ್ದತೆಗಳು ಪ್ರಾರಂಭಗೊಂಡಿದೆ ಅಂದಿದ್ದಾರೆ. ಇದೊಂದು ಪಕ್ಕಾ ಅರೆಂಜ್ಡ್ ಮದುವೆಯಾಗಿದ್ದು, ಕೆಲವೇ ದಿನಗಳಲ್ಲಿ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಕಾವ್ಯಾಗೌಡ ಹೇಳಿದ್ದಾರೆ.
Discussion about this post