ಸಾಮಾಜಿಕ ಜಾಲತಾಣಗಳ ಊಹೆಯಂತೆ ಹಾಸ್ಯ ನಟ ಕುರಿ ಪ್ರತಾಪ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಕಿಚ್ಚ ಸುದೀಪ್ ಕುರಿ ಪ್ರತಾಪ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ.
ಕುರಿಗಳು ಸಾರ್ ಕುರಿಗಳು ಅನ್ನುವ ಕಾರ್ಯಕ್ರಮದ ಮೂಲಕ ಕನ್ನಡ ಜನತೆಗೆ ಪರಿಚಯವಾದ ಪ್ರತಾಪ್, ಇದೇ ಕಾರ್ಯಕ್ರಮದ ಕಾರಣದಿಂದ ಕುರಿ ಪ್ರತಾಪ್ ಎಂದೇ ಪ್ರಸಿದ್ಧಿಯನ್ನು ಪಡೆದರು. ಆ ನಂತರ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಕಿರು ತೆರೆಯ ಹಲವು ಕಾರ್ಯಕ್ರಮಗಳಲ್ಲೂ ಪಾಲ್ಗೊಂಡರು.
ಮಜಾ ಟಾಕೀಸ್ ಕುರಿ ಪ್ರತಾಪ್ ಅವರಿಗೆ ದೊಡ್ಡದೊಂದು ಬ್ರೇಕ್ ಕೊಟ್ಟಿತು. ಮೈಸೂರಿನಲ್ಲಿ ತಮ್ಮ ಹೆತ್ತವರು ಹಾಗೂ ಪತ್ನಿ ಇಬ್ಬರು ಮಕ್ಕಳ ಜೊತೆ ವಾಸವಾಗಿರುವ ಕುರಿ ಪ್ರತಾಪ್ ಮಹಾ ಮನೆ ಪ್ರವೇಶದಿಂದ ನಗುವಿನ ಅಲೆ ಉಕ್ಕುವುದು ಖಚಿತವಾಗಿದೆ.
ಆದರೆ ಪ್ರತಾಪ್ ಅವರು ಪ್ರತೀ ಸಲ ಹಾರಿಸುವ ಹಾಸ್ಯ ಚಟಾಕಿ ಮತ್ತೊಬ್ಬರಿಗೆ ಹರ್ಟ್ ಆಗಿ ಅದು ಜಗಳಕ್ಕೆ ಕಾರಣವಾಗುವುದರಲ್ಲಿಯೂ ಸಂಶಯವಿಲ್ಲ.
ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 7 ರ ಟ್ರೋಫಿ ಎತ್ತಿ ಹಿಡಿಯಬಲ್ಲ ಸ್ಪರ್ಧಿಯೊಬ್ಬನ ಪ್ರವೇಶದಿಂದ ಸ್ಪರ್ಧೆಗೆ ಕಾವು ಬಂದಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191013184705″);
document.getElementById(“div_6020191013184705”).appendChild(scpt);
Discussion about this post