ಡಿಗ್ರಿ ಓದುತ್ತಿರುವ ಸಂದರ್ಭದಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿದಲ್ಲಿ ಇಂಟರ್ಶಿಪ್ ಮಾಡುತ್ತಿದ್ದ ಲಾಸ್ಯ ನಾಗರಾಜ್ , ಪತ್ರಕರ್ತೆಯಾಗಬೇಕು ಅಂದುಕೊಂಡಿದ್ದರು. ಆದರೆ ಡಿಗ್ರಿ ಫೈನಲ್ ಇಯರ್ಗೆ ಬರುವ ಹೊತ್ತಿಗೆ, ಆ್ಯಕ್ಟಿಂಗ್ ಮೇಲೆ ಆಸಕ್ತಿ ಬೆಳೆಯಿತು. ಹೀಗಾಗಿ ಮದುಮಗಳು, ಮತ್ತು ಪದ್ಮಾವತಿ ಸೀರಿಯಲ್ಗಳಲ್ಲಿ ನಟಿಸಲು ಆರಂಭಿಸಿದರು.
ಜೊತೆಗೆ ಡಾನ್ಸ್ ಬಗ್ಗೆ ಬಹಳ ಆಸಕ್ತಿ ಇದ್ದ ಕಾರಣ ಡಾನ್ಸ್ ಕಲಿಕೆ ಬಗ್ಗೆ ಮುಖ ಮಾಡಿದರು. ಅದೇ ಸಮಯಕ್ಕೆ ಬಿಗ್ಬಾಸ್ ನಿಂದ ಆಫರ್ ಬಂತು. ಅಲ್ಲಿಗೂ ಹೋಗಿ ಬಂದ ಲಾಸ್ಯ ನಾಗರಾಜ್ ಸಂಯುಕ್ತಾ ಹೆಗಡೆ ಗೆಳತಿ ಅನ್ನುವ ಕಾರಣಕ್ಕೆ ಜನರಿಂದ ಒಂದಿಷ್ಟು ತಿರಸ್ಕಾರಕ್ಕೆ ಒಳಗಾದರು. (ಅಷ್ಟು ಹೊತ್ತಿಗೆ ಸಂಯುಕ್ತಾ ಸಮೀರ್ ಆಚಾರ್ಯ ಮೇಲೆ ದಾಳಿ ಮಾಡಿ ನೆಗೆಟಿವ್ ಇಮೇಜ್ ಬೆಳೆಸಿಕೊಂಡಿದ್ದರು.)
ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಅಸತೋಮ ಸದ್ಗಮಯ ಚಿತ್ರದಲ್ಲಿ ನಟಿಸಿದ್ದ ಲಾಸ್ಯ, ಬಿಗ್ ಬಾಸ್ ಮನೆಗೆ ಹೋದ ಮೇಲೆ ಜನರಿಗೆ ಪರಿಚಯವಾದರು ನಿಜ. ಆದರೆ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ನಿರೀಕ್ಷಿತ ಅವಕಾಶ ಬರಲಿಲ್ಲ.
ಆದರೆ ಇದೀಗ ಕಾಲ ಬದಲಾಗಿದೆ, ಅಸೋತಮ ಸದ್ಗಮಯ ಚಿತ್ರದ ನಂತರ ಉಪೇಂದ್ರ ಅವರ ಹೋಂ ಮಿನಿಸ್ಟರ್, ಅಂಬಿ ನಿಂಗೆ ವಯಸ್ಸಾಯ್ತೋ, ಮಂಗಳವಾರ ರಜಾ ದಿನ, ಚಿತ್ರದಲ್ಲಿ ನಾಯಕಿಯಾಗಿ ಲಾಸ್ಯ ಕಾಣಿಸಿಕೊಳ್ಳಲು ಹೊರಟಿದ್ದಾರೆ.
ಹಾಗಾದರೆ ಚಂದನವನದಲ್ಲಿ ಲಾಸ್ಯ ನಾಗರಾಜ್ ನೆಲೆಯೂರುತ್ತಾರ..?
[youtube https://www.youtube.com/watch?v=oJr2b-ctJ5o&w=853&h=480]
Discussion about this post