ಸಪ್ಟಂಬರ್ ತಿಂಗಳ ಮೊದಲ ದಿನವೇ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. ಗೃಹ ಬಳಕೆಯ LPG ದರವನ್ನು ಇಂಧನ ಕಂಪನಿಗಳು 25 ರೂಪಾಯಿಯಷ್ಟು ಹೆಚ್ಚಿಸಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬಂದಿದೆ. ಕೇವಲ 15 ದಿನಗಳಲ್ಲಿ ಎರಡನೇ ಬಾರಿ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿದ್ದು, ಅಡುಗೆ ಮಾಡುವುದೇ ಕಷ್ಟ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ದರ ಏರಿಕೆಯಾದ್ರೆ ಗ್ಯಾಸ್ ಸಿಲಿಂಡರ್ ಸೈಡಿಗಿಟ್ಟು ಉರುವಲು ಬಳಸಿ ಒಲೆಯಲ್ಲಿ ಅಡುಗೆ ಮಾಡುವುದೇ ಉತ್ತಮ.
2021 ಜನವರಿಗೆ ತಿಂಗಳಲ್ಲಿ 694 ರೂಪಾಯಿ ಇದ್ದ ಸಿಲಿಂಡರ್ ದರ ವರ್ಷ ಮುಗಿಯಲು ಇನ್ನೂ ಮೂರು ತಿಂಗಳಿದೆ ಅನ್ನುವಾಗ 844ಕ್ಕೆ ಏರಿದೆ. ಕೇವಲ ಅಡುಗೆ ಸಿಲಿಂಡರ್ ಮಾತ್ರವಲ್ಲದೆ 19 ಕೆಜಿ ತೂಗುವ ವಾಣಿಜ್ಯ ಸಿಲಿಂಡರ್ ದರ 1693ಕ್ಕೆ ಏರಿದೆ. ಇದರಿಂದ ಹೋಟೇಲ್ ಸೇರಿದಂತೆ ಉಪಹಾರ ಮಂದಿರದ ಮಾಲೀಕರು ಆಹಾರ ಐಟಂಗಳ ದರ ಏರಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
Discussion about this post