ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ ಎಂದು ಸರ್ಕಾರಗಳೇ ಘೋಷಣೆ ಬರೆಸಿ ಊರೆಲ್ಲಾ ಹಂಚುತ್ತದೆ. ಮತ್ತೊಂದು ಕಡೆ ಸರ್ಕಾರ ಬೊಕ್ಕಸದ ಆದಾಯಕ್ಕೆ ಇದೊಂದೇ ದಾರಿ ಎಂದು ಎಣ್ಣೆ ಅಂಗಡಿಗಳನ್ನು ತೆರಯಲು ಸರ್ಕಾರ ಪ್ರೋತ್ಸಾಹ ನೀಡುತ್ತದೆ.
ಇನ್ನು ಸರ್ಕಾರದ ವಿರುದ್ಧ ಸಿಡಿದೇಳುವ ಮಹಿಳೆಯರು ಲಿಕ್ಕರ್ ಶಾಪ್ ಗಳಿಗೆ ಬೀಗ ಜಡಿದ ಅನೇಕ ಉದಾಹರಣೆಗಳು ನಮ್ಮ ನಡುವಿದೆ.
ಈ ನಡುವೆ ಅನೇಕ ರಾಜ್ಯ ಸರ್ಕಾರಗಳು ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವನ್ನೂ ಮಾಡಿದೆ. ಹಾಗಂತ ಅದು ಸಂಪೂರ್ಣ ನಿಷೇಧವಲ್ಲ.
ಇದೀಗ ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಸರ್ಕಾರ ಮಹಿಳೆಯರಿಗೆ ಅಂತಾನೇ ಪ್ರತ್ಯೇಕ ಮಹಿಳಾ ಸ್ನೇಹಿ ಮದ್ಯದಂಗಡಿಗಳನ್ನು ತೆರಯಲು ನಿರ್ಧರಿಸಿದೆಯಂತೆ.
ಮಾಹಿತಿಗಳ ಪ್ರಕಾರ ಮಹಿಳೆಯರು ಹೆಚ್ಚಾಗಿ ಕುಡಿಯುವ ಮದ್ಯದ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗೆ ಶೀಘ್ರದಲ್ಲೇ ರಾಜ್ಯದಲ್ಲಿ ಚಾಲನೆ ದೊರೆಯಲಿದೆ.
ಭೋಪಾಲ್ ಹಾಗೂ ಇಂಧೋರ್ ನಲ್ಲಿ ತಲಾ ಎರಡು ಅಂಗಡಿಗಳನ್ನು ತೆರೆದ್ರೆ, ಜಬಲಾಪುರ್ ಮತ್ತು ಗ್ವಾಲ್ಲೂರ್ ನಲ್ಲಿ ತಲಾ ಒಂದು ಮಹಿಳಾ ಸ್ನೇಹಿ ಮದ್ಯದಂಗಡಿಗಳು ಪ್ರಾರಂಭವಾಗಲಿದೆಯಂತೆ.
ಈ ಯೋಜನೆ ಯಶಸ್ವಿಯಾದರೆ ಮತ್ಯಾವ ರಾಜ್ಯದಲ್ಲಿ ಮಹಿಳೆಯರಿಗೆ ಮಾತ್ರ ಎಂದು ಬೋರ್ಡ್ ತಗುಲಿಸಿ ಮದ್ಯ ಮಾರಾಟ ಮಳಿಗೆಗಳು ಪ್ರಾರಂಭವಾಗುತ್ತದೋ ದೇವರಿಗೆ ಗೊತ್ತು.
Discussion about this post