ಕೇರಳ : ನೀಲಿ ಚಿತ್ರದ ವಿಡಿಯೋದಲ್ಲಿದ್ದ ಮಹಿಳೆಯೊಬ್ಬರ ಮುಖಕ್ಕೆ ಮಲಯಾಳಿ ನಟಿ ರಮ್ಯಾ ಸುರೇಶ್ ಮುಖವನ್ನು ಇಟ್ಟು ಎಡಿಟ್ ಮಾಡಿ ವಿಡಿಯೋ ಒಂದನ್ನು ಹರಿ ಬಿಡಲಾಗಿದೆ. ತಕ್ಷಣ ನೋಡಿದವರು ಇದು ರಮ್ಯ ಅವರದ್ದೇ ವಿಡಿಯೋ ಅಂದುಕೊಳ್ಳಬೇಕು.
ಇದೀಗ ನಕಲಿ ಪೋರ್ನ್ ವಿಡಿಯೋ ವಿರುದ್ಧ ನಟಿ ರಮ್ಯಾ ಸುರೇಶ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಆಲಪ್ಪುಳ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿರುವ ನಟಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಜೊತೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಲಾಗಿದೆ.

ವಿಡಿಯೋ ಬಗ್ಗೆ ಮಾತನಾಡಿರುವ ರಮ್ಯ, ವಿಡಿಯೋ ವೈರಲ್ ಆದ ಬೆನ್ನಲ್ಲೇ ನನಗೆ ಸಿಕ್ಕಾಪಟ್ಟೆ ಫೋನ್ ಕರೆಗಳು ಬರುತ್ತಿದೆ. ಅದು ನಾನಲ್ಲ ಎಂದು ಹೇಳಿ ಹೇಳಿ ಸಾಕಾಗಿದೆ. ದುಷ್ಕರ್ಮಿಗಳು ಮಾಡಿದ ಕೃತ್ಯದಿಂದ ನನ್ನ ನೆಮ್ಮದಿ ಹಾಳಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
Discussion about this post