ದಕ್ಷಿಣ ಭಾರತದ ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಟೀಂ ಇಂಡಿಯಾ ಆಟಗಾರ ಮನೀಶ್ ಪಾಂಡೆ ಸಜ್ಜಾಗಿದ್ದಾರೆ.
ನಟಿ ಆಶ್ರಿತಾ ಶೆಟ್ಟಿ ಜೊತೆ ಡಿಸೆಂಬರ್ 2ರಂದು ಮನೀಶ್ ಪಾಂಡೆ ಮದುವೆಯಾಗಲಿದ್ದಾರೆ ಅನ್ನಲಾಗಿದೆ.
26 ವರ್ಷದ ಆಶ್ರಿತಾ ಶೆಟ್ಟಿ ತೆಲಿಕೆದ ಬೊಳ್ಳಿ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಬ್ಯಾಕ್ ಟು ಬ್ಯಾಕ್ ಮೂರು ತಮಿಳು ಚಿತ್ರಗಳಲ್ಲಿ ಆಶ್ರಿತಾ ನಟಿಸಿದ್ದಾರೆ.
ಡಿಸೆಂಬರ್ 2ರಂದು ಮುಂಬೈನಲ್ಲಿ ಈ ಜೋಡಿಯ ಮದುವೆ ನಡೆಯಲಿದೆಯಂತೆ.
Discussion about this post