ಒಂದೇ ವ್ಯಕ್ತಿಯನ್ನು ಹೋಲುವ ಏಳು ಮಂದಿ ಭೂಮಿ ಮೇಲೆ ಇರುತ್ತಾರೆ ಅನ್ನುವುದು ನಂಬಿಕೆ. ಕೆಲವೊಮ್ಮೆ ಹೌದು ಅನ್ನಿಸುವ ಘಟನೆಗಳು ಕೂಡಾ ನಡೆದಿದೆ. ಕನ್ನಡ ರಿಯಾಲಿಟಿ ಶೋ ಒಂದರಲ್ಲಿ ದರ್ಶನ್ ನನ್ನು ಹೋಲುವ ಹುಡುಗನೊಬ್ಬ ಇತ್ತೀಚೆಗೆ ಸದ್ದು ಮಾಡಿದ್ದ. ಅಷ್ಟೇ ಯಾಕೆ, ಜ್ಯೂನಿಯರ್ ರವಿಚಂದ್ರನ್, ಜ್ಯೂನಿಯರ್ ಉಪೇಂದ್ರ ಹೀಗೆ ಕನ್ನಡದ ಸ್ಟಾರ್ ನಟರನ್ನು ಹೋಲುವ ಜೂನಿಯರ್ ಗಳು ಕೂಡಾ ನಮ್ಮಲ್ಲಿದ್ದಾರೆ.
ಇದೀಗ ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯಾ ರೈ ಯನ್ನೇ ಹೋಲುವ ಮತ್ತೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಆಶಿತಾ ಸಿಂಗ್ ಹೆಸರಿನ ಇವರು ಇನ್ಸ್ಟಾಗ್ರಾಂನಲ್ಲಿ ತಮ್ಮ ಫೊಟೋ, ರೀಲ್ಸ್ ಮುಖಾಂತರ ಲೈಕ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಐಶ್ವರ್ಯಾ ರೈ ಅವರ ಮಾದರಿಯಲ್ಲಿಯೇ ಕೆಲವು ಫೊಟೊಗಳನ್ನೂ ತೆಗೆಸಿಕೊಂಡಿರುವ ಆಶಿತಾ ಈಗ ಎಲ್ಲರ ಕಣ್ಮಣಿಯಾಗಿದ್ದಾರೆ.
ಇನ್ನು ಅಶಿತಾ ಬಗ್ಗೆ ಕಮೆಂಟ್ ಮಾಡಿರುವ ನೆಟ್ಟಿಗರು ಐಶ್ವರ್ಯಾ ರೈ ಅವರಿಗೂ ಆಶಿತಾ ಸಿಂಗ್ ಅವರಿಗೂ ನೋಡುವುದಕ್ಕೆ ಬಹಳ ವ್ಯತ್ಯಾಸವಿಲ್ಲ ಅಂದಿದ್ದಾರೆ. ಇನ್ನು ಕೆಲ ವರ್ಷಗಳ ಹಿಂದೆ ಸಲ್ಮಾನ್ ಖಾನ್ ಐಶ್ವರ್ಯಾ ರೈಯನ್ನೇ ಹೋಲುವ ಸ್ನೇಹಾ ಉಳ್ಳಾಲ್ ಅನ್ನುವರನ್ನು ಕರೆ ತಂದು ಸಿನಿಮಾ ಕೂಡಾ ಮಾಡಿದ್ದರು.
Discussion about this post