ಮಾಹಿತಿ ತಂತ್ರಜ್ಞಾನ ಲೋಕದ ದೈತ್ಯ ಸಂಸ್ಥೆ ಮೈಕ್ರೋ ಸಾಫ್ಟ್ ನ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಸತ್ಯ ನಾಡೆಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಸಂಸ್ಥೆಯ CEO ಆಗಿರುವ ಸತ್ಯಾ ನಾಡೆಲ್ಲಾ ಅವರಿಗೆ ಇದು ಹೆಚ್ಚುವರಿ ಜವಾಬ್ದಾರಿಯಾಗಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರನ್ನು ಜಾನ್ ಥಾಂಪ್ಸನ್ ಬದಲಿಗೆ ತನ್ನ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಸ್ಟೀವ್ ಬಾಲ್ಮರ್ ಅವರಿಂದ 2014 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಾಡೆಲ್ಲಾ Satya Nadella ಲಿಂಕ್ಡ್ ಇನ್, ನ್ಯೂನ್ಸ್ ಕಮ್ಯುನಿಕೇಷನ್ಸ್ ಮತ್ತು ಜೆನಿಮ್ಯಾಕ್ಸ್ ನಂತಹ ಬಿಲಿಯನ್ ಡಾಲರ್ ಕಂಪನಿಗಳನ್ನು ಸ್ವಾಧೀನ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜೊತೆಗೆ ಬಿಲ್ ಗೇಟ್ಸ್ ಕನಸನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದರು.

ಮಂಡಳಿಯ ಸ್ವತಂತ್ರ ನಿರ್ದೇಶಕರು ನಾಡೆಲ್ಲಾ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಮೈಕ್ರೋಸಾಫ್ಟ್ ತಿಳಿಸಿದ್ದು, ಈ ಹಿಂದೆ ಅಧ್ಯಕ್ಷರಾಗಿದ್ದ ಜಾನ್ ಡಬ್ಲ್ಯೂ ಥಾಂಪ್ಸನ್ ಅವರು ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 2014 ರಲ್ಲಿ ಬಿಲ್ ಗೇಟ್ಸ್ Bill Gates ಅವರಿಂದ ಅಧ್ಯಕ್ಷರಾಗಿ ಥಾಂಪ್ಸನ್ ಅಧಿಕಾರ ವಹಿಸಿಕೊಂಡಿದ್ದರು.
Discussion about this post