ಬೆಂಗಳೂರು : ಕೆಲ ವರ್ಷಗಳ ಹಿಂದೆ ವಿಧಾನ ಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ ದೊಡ್ಡ ಮಟ್ಟದ ಸದ್ದು ಮಾಡಿದ್ದು. ಕಾಂಗ್ರೆಸ್ ಅಂತೂ ಬ್ಲೂ ಬಾಯ್ಸ್ ವಿಚಾರದಲ್ಲಿ ಹಬ್ಬ ಮಾಡಿತ್ತು.
ಆದರೆ ಇದೀಗ ಕಾಂಗ್ರೆಸ್ ಶಾಸಕರೇ ವಿಧಾನ ಪರಿಷತ್ತಿನಲ್ಲಿ ಕೂತು ನೀಲಿ ಚಿತ್ರ ವೀಕ್ಷಿಸಿದ್ದಾರೆ.
ಸದನ ಕಲಾಪ ಪ್ರಾರಂಭವಾಗುತ್ತಿದ್ದಂತೆ ನಾಡಿನ ಅಭಿವೃದ್ಧಿಯ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಪ್ರಕಾಶ್ ರಾಥೋಡ್ ಮೊಬೈಲ್ ನಲ್ಲಿ ಬ್ಯುಸಿ ಇದ್ರು. ಮೊಬೈಲ್ ನಲ್ಲಿ ಅಭಿವೃದ್ಧಿ ಬಗ್ಗೆ ಸರ್ಚ್ ಮಾಡುತ್ತಿದ್ರೆ ಪರವಾಗಿರಲಿಲ್ಲ, ಬದಲಾಗಿ ಅವರು ನೀಲಿ ಚಿತ್ರ ವೀಕ್ಷಣೆಯಲ್ಲಿ ತೊಡಗಿದ್ದರು ಎಂದು ಪವರ್ ಟಿವಿ ವರದಿ ಮಾಡಿದೆ.

ಈ ಬಗ್ಗೆ ನಮ್ಮಲ್ಲಿ ಸ್ಪಷ್ಟ ಸಾಕ್ಷಿ ಇದೆ, ಸಂಬಂಧ ಪಟ್ಟ ವಿಡಿಯೋಗಳು ಕೂಡಾ ಇದೆ. ಆದರೆ ಅದನ್ನು ಜನರಿಗೆ ತೋರಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಪವರ್ ಟಿವಿ ಹೇಳಿದೆ.
ಅಂದು ಬಿಜೆಪಿ ಶಾಸಕರು ನೀಲಿ ಚಿತ್ರ ವೀಕ್ಷಿಸಿದ ಕಾರಣಕ್ಕೆ ಅಬ್ಬರಿಸಿ ಬೊಬ್ಬಿರದ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಬ್ಲೂ ಬಾಯ್ ಬಗ್ಗೆ ಅದೇನು ಹೇಳ್ತಾರೋ ಗೊತ್ತಿಲ್ಲ.
Discussion about this post