crossorigin="anonymous"> ಅದೊಂದು ಹೇಳಿಕೆಯ ಮೂಲಕ ಹೈಕಮಾಂಡ್ ಮುಂದೆ ತಾಕತ್ತು ತೋರಿದ್ರ BSY - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
ಕರ್ನಾಟಕ ರಾಜಕೀಯ

ಅದೊಂದು ಹೇಳಿಕೆಯ ಮೂಲಕ ಹೈಕಮಾಂಡ್ ಮುಂದೆ ತಾಕತ್ತು ತೋರಿದ್ರ BSY

ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುವುದು ಬಿಜೆಪಿ ಹೈಕಮಾಂಡ್ ಪ್ಲಾನ್. ಆದರೆ ಡಿಕೆ ಶಿವಕುಮಾರ್ ಆಪರೇಷನ್ ಹಸ್ತ ಶುರುವಿಟ್ಟುಕೊಂಡಿದ್ದಾರೆ ಅನ್ನುವ ಒಂದು ಸಾಲಿನ ಹೇಳಿಕೆ ಮೂಲಕ ನಾನೂ ನಾಯಕನಿದ್ದೇನೆ ಅನ್ನುವ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ.

Radhakrishna Anegundi by Radhakrishna Anegundi
21-09-21, 5 : 58 pm
in ರಾಜ್ಯ
dkc bsy
Share on FacebookShare on TwitterWhatsAppTelegram

ಬೆಂಗಳೂರು : ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗೋದಿಲ್ಲ ಅನ್ನುವ ಮಾತುಗಳಿತ್ತು. ತಮ್ಮ ಹಾಗೂ ತಮ್ಮ ಮಕ್ಕಳ ಕ್ಷೇತ್ರದ ಬಗ್ಗೆ ಮಾತ್ರ ಅವರು ತಲೆ ಕೆಡಿಸಿಕೊಳ್ಳಲಿದ್ದಾರೆ ಅನ್ನಲಾಗಿತ್ತು. ಆದರೆ ಯಡಿಯೂರಪ್ಪ ಅವರ ನಡೆ ನೋಡಿದರೆ ಮುಂದಿನ ಚುನಾವಣೆಯಲ್ಲೂ ಅವರದ್ದೇ ನಾಯಕತ್ವ ಬಿಜೆಪಿಗೆ ಅನಿವಾರ್ಯವಾಗಲಿದೆ ಅನ್ನುವುದರಲ್ಲಿ ಅನುಮಾನವಿಲ್ಲ

ಈ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂದು ಘೋಷಿಸಿದ್ದರು. ಆಗ ಅದಕ್ಕೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಮುಂದಿನ ಚುನಾವಣೆಯನ್ನು ಮೋದಿಯ ವರ್ಚಸ್ಸಿನಿಂದ ಮಾತ್ರ ಗೆಲ್ಲಲು ಸಾಧ್ಯವಿಲ್ಲ, ಈಗಾಗಲೇ ಡಿಕೆ ಶಿವಕುಮಾರ್ ಆಪರೇಷನ್ ಹಸ್ತ ಶುರು ಮಾಡಿದ್ದಾರೆ ಅನ್ನುವ ಮೂಲಕ ಅಮಿತ್ ಶಾ ಅವರ ಅವತ್ತಿನ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ  ತಮ್ಮ ನೆಟ್ ವರ್ಕ್ ಏನು ಅನ್ನುವುದನ್ನೂ ಸಾಬೀತು ಮಾಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆ ಯಾರ ನಾಯಕತ್ವದಲ್ಲಿ ನಡೆಯಬೇಕಾಗಬಹುದು ಅನ್ನುವುದನ್ನು ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ.

ಡಿಕೆಶಿಯವರ ಆಪರೇಷನ್ ಹಸ್ತದ ಕುರಿತಂತೆ ರಾಜ್ಯದ ಅದ್ಯಾವ ಬಿಜೆಪಿ ನಾಯಕರಿಗೂ ಸಿಗದ ಮಾಹಿತಿ ಯಡಿಯೂರಪ್ಪ ಅವರಿಗೆ ಸಿಕ್ಕಿದೆ. ಹಾಗೇ ನೋಡಿದರೆ ಈ ಮಾಹಿತಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ಸಿಕ್ಕಿರಬೇಕಿತ್ತು. ಗುಪ್ತಚರ ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಿಗಬೇಕಿತ್ತು, ಆದರೆ ಅವರಿಬ್ಬರಿಗೆ ಸಿಗದ ಮಾಹಿತಿ ಯಡಿಯೂರಪ್ಪ ಅವರಿಗೆ ಸಿಕ್ಕಿದೆ ಅಂದ್ರೆ ಯಡಿಯೂರಪ್ಪ ಅವರ ರಾಜಕೀಯ ತಂತ್ರಗಾರಿಕೆಯನ್ನು ಕೇಂದ್ರ ನಾಯಕರು ಅರ್ಥಮಾಡಿಕೊಳ್ಳಲೇಬೇಕಿದೆ.

ಇನ್ನು ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಮ್ಮ ತಂತ್ರಗಾರಿಕೆಯನ್ನು ನಾವು ಮಾಡುತ್ತೇವೆ, ನಮ್ಮ ನಡೆಯ ಗುಟ್ಟನ್ನು ನಾವು ಬಿಟ್ಟುಕೊಡುವುದಿಲ್ಲ. ಬಿಜೆಪಿಯವರನ್ನು ಯಾರೆಲ್ಲಾ ಸಂಪರ್ಕಿಸಿದ್ದಾರೆ ಅನ್ನುವ ಕುರಿತಂತೆ ಮೊದಲು ವಿಷಯ ಬಹಿರಂಗವಾಗಲಿ ಅಂದಿದ್ದಾರೆ. ಬಳಿಕ ನಾನು ಮಾತನಾಡುತ್ತೇನೆ ಅಂದಿದ್ದಾರೆ.

Tags: bsyಬಿಜೆಪಿ
Share4TweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್