crossorigin="anonymous"> Muddahanume gowda : ಇದಪ್ಪ ರಾಜೀನಾಮೆ ಅಂದ್ರೆ : ಗೌರವಯುತವಾಗಿ ಕಾಂಗ್ರೆಸ್ ನಿಂದ ಹೊರ ಬರಲು ನಿರ್ಧರಿಸಿದ ಮುದ್ದಹನುಮೇ ಗೌಡ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Muddahanume gowda : ಇದಪ್ಪ ರಾಜೀನಾಮೆ ಅಂದ್ರೆ : ಗೌರವಯುತವಾಗಿ ಕಾಂಗ್ರೆಸ್ ನಿಂದ ಹೊರ ಬರಲು ನಿರ್ಧರಿಸಿದ ಮುದ್ದಹನುಮೇ ಗೌಡ

Radhakrishna Anegundi by Radhakrishna Anegundi
01-09-22, 2 : 06 pm
in ರಾಜ್ಯ
Muddahanume gowda
Share on FacebookShare on TwitterWhatsAppTelegram

ದೇವೇಗೌಡರ ಕಾರಣದಿಂದ ರಾಜಕೀಯ ನೇಪಥ್ಯಕ್ಕೆ ಸರಿದ ಮುದ್ದಹನುಮೇ ಗೌಡ ( Muddahanume gowda) ಮತ್ತೆ ಎದ್ದು ಬರಲೇ ಇಲ್ಲ. ಅವರಿಗೆ ಸಿಕ್ಕಿದ್ದು ಬರೀ ಅವಮಾನ

ತುಮಕೂರು :  ಒಂದಿಷ್ಟು ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಹಿರಿಮೆಯನ್ನು ಕಾಂಗ್ರೆಸ್ ಮುಖಂಡ ಮುದ್ದಹನುಮೇ ಗೌಡ ( Muddahanume gowda) ಉಳಿಸಿಕೊಂಡಿದ್ದಾರೆ. ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷದಿಂದ ಸತತ ಅನ್ಯಾಯವಾದರೂ ನುಂಗಿಕೊಂಡು ಕೂತಿದ್ದ ಮುದ್ದಹನುಮೇ ಗೌಡ ಇದೀಗ ಗೌರವಯುತವಾಗಿ ಪಕ್ಷದಿಂದ ಹೊರ ಬರಲು ತೀರ್ಮಾನಿಸಿದ್ದಾರೆ. ಉಳಿದ ನಾಯಕರಂತೆ ಅವಕಾಶ ಕೊಟ್ಟ ಪಕ್ಷವನ್ನು ಹಾದಿ ಬೀದಿಯಲ್ಲಿ ಟೀಕಿಸದೆ ಕೈ ಪಾಳಯಕ್ಕೆ ಮುದ್ದಹನುಮೇ ಗೌಡ ಗುಡ್ ಬೈ ಹೇಳಲಿದ್ದಾರೆ.

2014ರಲ್ಲಿ ನಡೆದ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದ ಮುದ್ದಹನುಮೇ ಗೌಡರಿಗೆ 2019ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ದೇವೇಗೌಡರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುದ್ದಹನುಮೇ ಗೌಡ ಸೈಡ್ ಲೈನ್ ಮಾಡಲಾಗಿತ್ತು. ಹೋಗ್ಲಿ ದೇವೇಗೌಡರ ಗೆದ್ರ ಇಲ್ಲ, ಬಿಜೆಪಿ ಅಲ್ಲಿ ಗೆಲುವಿನ ನಗೆ ಬೀರಿತ್ತು.

Read More : Puttur : ಪುತ್ತೂರಿನಲ್ಲಿ ಕರಿಮಣಿ ಎಳೆದ ಫೈಜಲ್ ಗ್ಯಾಂಗ್ ನ ಮತ್ತೊಂದು ಕೃತ್ಯ ಬೆಳಕಿಗೆ

ಈ ವೇಳೆ ಮುದ್ದಹನುಮೇ ಗೌಡ ಅವರಿಗೆ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಕರೆ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡೋದಾಗಿ ಹೇಳಿದ್ರು. ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿರಲಿಲ್ಲ. 1994 ಮತ್ತು 1999 ರಲ್ಲಿ ಕುಣಿಗಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮುದ್ದಹನುಮೇ ಗೌಡ 2023ರಲ್ಲಿ ಇದೇ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು.

muddehanumegowda siddu

ನಾನು ಲೋಕಸಭೆಯಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರಿಗಾಗಿ ನನ್ನ ಸ್ಥಾನ ತ್ಯಾಗ ಮಾಡಿದ್ದೆ. ಈಗ ನನಗಾಗಿ ಶಾಸಕ ಡಾ.ರಂಗನಾಥ್ ಸ್ಥಾನ ತ್ಯಾಗ ಮಾಡಲಿ ಎಂದು ಹೇಳುವ ಮೂಲಕ 2023ರ ವಿಧನಾಸಭಾ ಚುನಾವಣೆಗೆ ಕುಣಿಗಲ್‌ನಿಂದ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದರು.

ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಇಲ್ಲಿಂದ ಸ್ಪರ್ಧೆ ಮಾಡಬೇಕೆಂದು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯ ಉಸ್ತುವಾರಿ ಸುರ್ಜೆವಾಲಾರಿಗೂ ಈ ಬಗ್ಗೆ ಬೇಡಿಕೆ ಇಟ್ಟಿದ್ದೇನೆ. ರಾಜ್ಯ ಪಕ್ಷದ ಮುಖಂಡರಿಗೂ ಹೇಳಿದ್ದೇನೆ. ನಾನು ಕುಣಿಗಲ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದೆ. ಅಲ್ಲಿ ಹಾಲಿ ಶಾಸಕರಿರುವುದರಿಂದ ಟಿಕೆಟ್ ಕೊಡಲು ಆಗಲ್ಲ ಅಂತಿದ್ದಾರೆ. ನಾನೂ ಹಾಲಿ ಸಂಸದರಿರುವಾಗ ನನಗೆ ಟಿಕೆಟ್ ತಪ್ಪಿಸಿ ದೇವೇಗೌಡರಿಗೆ ಕೊಟ್ಟಿದ್ದು ನೆನಪಿಸಿದೆ. ನಾನು ಅಂದು ತ್ಯಾಗ ಮಾಡಿದಕ್ಕೆ ಇಂದು ಕುಣಿಗಲ್ ಶಾಸಕರು ತ್ಯಾಗ ಮಾಡಲಿ ಅಂದಿದ್ದರು. ಆದರೆ ಡಿಕೆಶಿ ಸಂಬಂಧಿ ಡಾ.ರಂಗನಾಥ್ ಕುಣಿಗಲ್ ಕ್ಷೇತ್ರವನ್ನು ಬಿಟ್ಟುಕೊಡುವ ಯಾವ ಲಕ್ಷಣಗಳು ಇರಲಿಲ್ಲ.

muddehanumegowda dkc

ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಗೊಂಡಿರುವ ಮುದ್ದಹನುಮೇ ಗೌಡ ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಈ ಸಂಬಂಧ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವ  ಅವರು,ಪಕ್ಷದಿಂದ ಬಿಡುಗಡೆ ಮಾಡಿ ಎಂದು ಮನವಿ ಸಲ್ಲಿಸಿ ಬಂದಿದ್ದಾರೆ.

1989ರಲ್ಲಿ ಬಿ ಫಾರಂ ಕೊಟ್ಟು ನಂತರ ಬೇರೆಯವರನ್ನು ಕಣಕ್ಕಿಳಿಸಿದರು. 2019ರಲ್ಲಿ ಸಂಸದನಾಗಿದ್ದರೂ, ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಹೀಗೆ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ಪಕ್ಷಕಕ್ಕೆ ನನ್ನದೇ ಆದ ಅಳಿಲು ಸೇವೆಯನ್ನು ಮಾಡಿದ್ದೇನೆ. ಪಕ್ಷ ಅಧಿಕಾರಕ್ಕೆ ಬರುವಲ್ಲಿ ನನ್ನ ಸೇವೆಯೂ ಇದೆ ಎಂದು ತಮ್ಮ ರಾಜೀನಾಮೆ ಬಗ್ಗೆ ಮುದ್ದಹನುಮೇ ಗೌಡ ಹೇಳಿದ್ದಾರೆ.

ಹಾಗಾದ್ರೆ ಮುದ್ದಹನುಮೇ ಗೌಡ ಮುಂದೇನು ಮಾಡ್ತಾರೆ, ಕುಣಿಗಲ್ ಕ್ಷೇತ್ರದಿಂದ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಯಾವ ಪಕ್ಷದಿಂದ ಅವರು ಕಣಕ್ಕಿಳಿಯುತ್ತಾರೆ ಅನ್ನುವುದೇ ಈಗಿರುವ ಕುತೂಹಲ.

https://www.youtube.com/watch?v=UO1XpnVXJLU&t=66s
Tags: FEATURED
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್