ಬೆಂಗಳೂರು : ಆನ್ ಲೈನ್ ಮೂಲಕ ಬಟ್ಟೆ ಮಾರುವ ಪ್ರಖ್ಯಾತ ಸಂಸ್ಥೆ ಮಿಂತ್ರಾ ತನ್ನ ಲೋಗೋವನ್ನು ಬದಲಾಯಿಸಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ನೊಟೀಸ್ ಕೊಟ್ಟ ಹಿನ್ನಲೆಯಲ್ಲಿ ಮಿಂತ್ರಾ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.
ಮುಂಬೈ ಮೂಲದ ಅವೆಸ್ಟಾ ಅನ್ನುವ ಸ್ವಯಂ ಸೇವಾ ಸಂಘಟನೆಯ ನಾಜ್ ಪಟೇಲ್ ಎಂಬವರು ಮಿಂತ್ರಾ ಸಂಸ್ಥೆಯ ಲೋಗೋ ಮಹಿಳೆಯರ ಭಾವನಗಳಿಗೆ ಧಕ್ಕೆ ತರುವಂತಿದೆ ಎಂದು ಡಿಸೆಂಬರ್ ನಲ್ಲಿ ಕ್ರೈಮ್ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಲೋಗೋ ಬದಲಾಯಿಸದಿದ್ರೆ ಕಾನೂನು ಹೋರಾಟದ ಎಚ್ಚರಿಕೆಯನ್ನು ನಾಜ್ ಪಟೇಲ್ ನೀಡಿದ್ದರು.
ದೂರು ಸ್ವೀಕರಿಸಿದ ಪೊಲೀಸರು ಕಂಪನಿಗೆ ಈ ಮೇಲ್ ಮೂಲಕ ಲೋಗೋ ಬದಲಾವಣೆ ಬಗ್ಗೆ ತಿಳಿಸಿದ್ದಾರೆ. ಪೊಲೀಸರ ಈಮೇಲ್ ಗೆ ಸ್ಪಂದಿಸಿರುವ ಸಂಸ್ಥೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಲೋಗೋ ಬದಲಾಯಿಸಿದೆ.
ಮಿಂತ್ರಾ ಲೋಗೋ ಬೆತ್ತಲೆ ಮಹಿಳೆಯನ್ನು ಹೋಲುತ್ತಿದೆ ಅನ್ನುವುದು ನಾಜ್ ಪಟೇಲ್ ಆರೋಪವಾಗಿತ್ತು.
ಈ ನಡುವೆ ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಮತ್ತೆ ಕೆಲವರು ಮುಂಬೈ ಪೊಲೀಸರು ಬೇಕಾದ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವ ಬದಲು, ಬೇಡ ವಿಷಯಕ್ಕೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಅಂದಿದ್ದಾರೆ.
ಹಾಗಾದ್ರೆ ನಿಜಕ್ಕೂ ಈ ಲೋಗೋ ಮಹಿಳೆಯರ ಭಾವನಕ್ಕೆ ಧಕ್ಕೆ ತರುವಂತೆ ಇತ್ತಾ, ಲೋಗೋ ಬದಲಾವಣೆಯ ಅಗತ್ಯವಿತ್ತಾ ಎಂದು ಕಮೆಂಟ್ ಮಾಡಿ.
Discussion about this post