ಮೈಸೂರು : ಪ್ರೀತಿಯಲ್ಲಿ ಮೋಸವಾದರೆ ಜನ ಸಾಮಾನ್ಯರು ಪೊಲೀಸ್ ಠಾಣೆ ಮೆಟ್ಟಿಲೇರುವುದು ಸಾಮಾನ್ಯ. ಈ ವೇಳೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಮುನ್ನ ಪೊಲೀಸರು ಬುದ್ದಿಮಾತು ಹೇಳುವುದು ವಾಡಿಕೆ. ಒಂದು ವೇಳೆ ಅದು ಸಫಲವಾಗದೇ ಹೋದ್ರೆ ಕಾನೂನು ಪ್ರಕಾರ ಕ್ರಮಕ್ಕೆ ಮುಂದಾಗುತ್ತಾರೆ.
ಆದರೆ ಸಮಾಜವನ್ನು ತಿದ್ದಬೇಕಾದ ಪೊಲೀಸರೇ ಹಾದಿ ತಪ್ಪಿದ್ರೆ , ಮೈಸೂರಿನಲ್ಲಿ ಹೀಗೆ ಆಗಿದೆ. ಮದುವೆಯಾಗುವುದಾಗಿ ನಂಬಿಸಿ ಸಬ್ ಇನ್ಸ್ ಪೆಕ್ಟರ್ ಒಬ್ಬರು ಮಹಿಳಾ PSIಗೆ ವಂಚಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಆನಂದ್ ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಪಿಎಸ್ಐ ಗೆ ಮೋಸ ಮಾಡಿದ ಆರೋಪ ಎದುರಿಸುತ್ತಿದ್ದು, ಇದೀಗ ಮಹಿಳಾ ಪಿಎಸ್ಐ ಸಬ್ಇನ್ಸ್ ಪೆಕ್ಟರ್ ಆನಂದ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಆನಂದ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಸಬ್ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Discussion about this post