ಜೀಕನ್ನಡದ ಕಾಮಿಡಿ ಕಿಲಾಡಿಯಿಂದ ಸ್ಟಾರ್ ಪಟ್ಟಕ್ಕೇರಿದ ನಟ ಶಿವರಾಜ್ ಕೆ.ಆರ್ ಪೇಟೆ. ಕಾಮಿಡಿ ಕಿಲಾಡಿಗಳು ಸೀಸನ್ -01ರಲ್ಲಿ ಟಿ ಆರ್ ಪಿ ನಂಬರ್ ಆಗಿ ಗುರುತಿಸಿಕೊಂಡಿದ್ರು.
ಇದೀಗ ಅದೇ ಜೀ ಕನ್ನಡ ವಾಹಿನಿಯಲ್ಲಿ ಶಿವರಾಜ್ ಅಭಿನಯದ ಚೊಚ್ಚಲ ಚಿತ್ರ ನಾನು ಮತ್ತು ಗುಂಡ ಚಿತ್ರ ಪ್ರಿಮಿಯರ್ ಆಗಿದ್ದು ಚೊಚ್ಚಲ ಪ್ರಸಾರದಲ್ಲೇ ಬರೊಬ್ಬರಿ 7.2 TRP ಗಳಿಸಿದೆ. ಈ ಮೂಲಕ ಶಿವರಾಜ್ ಮತ್ತೊಮ್ಮೆ ತಮ್ಮ ಜನಪ್ರಿಯತೆಯನ್ನ, ತಮಗಿರೋ ಅಭಿಮಾನಿ ಬಳಗ ಎಷ್ಟು ದೊಡ್ಡದು ಅನ್ನೋದನ್ನ ಸಾಬೀತು ಮಾಡಿದ್ದಾರೆ.
ಇದಕ್ಕೆ ವಾಹಿನಿಯವರು ಮತ್ತು ಚಿತ್ರತಂಡ ಅಪಾರ ಸಂತಸ ವ್ಯಕ್ತಪಡಿಸಿದೆ. ಈ ಚಿತ್ರಕ್ಕೆ ಕನ್ನಡ ಪ್ರೇಕ್ಷಕರು ತೋರಿಸಿರುವಂಹ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.
ಅಂದ್ಹಾಗೆ ಹೆಚ್ಚು ಕಮ್ಮಿ ಸ್ಟಾರ್ ನಟರ ಸಿನಿಮಾಗಳು ಗಳಿಸುವಷ್ಟು TRP ಗಳಿಸಿರೋ ಶಿವರಾಜ್ ಕೆ.ಆರ್ ಪೇಟೆ ಅವರ ಮೇಲೆ ಇದೀಗ ಸಿನಿಮಾ ಮೇಕರ್ ಗಳ ಕಣ್ಣು ಬಿದಿದ್ದು, ಶಿವರಾಜ್ ಮೇಲೆ ಬಂಡವಾಳ ಹೂಡುವ ಯೋಜನೆಯಲ್ಲಿದ್ದಾರೆ.
ಈಗಾಗ್ಲೆ ಶಿವರಾಜ್ ಗೆ ಒಪ್ಪುವಂತಹ ಕಥೆಗಳನ್ನಿಟ್ಟುಕೊಂಡು ಮೂರ್ನಾಲ್ಕು ನಿರ್ದೇಶಕ ನಿರ್ಮಾಪಕರು ಅವಕಾಶಗಳನ್ನ ಅವರ ಮುಂದಿಟ್ಟಿದ್ದಾರೆ.
Discussion about this post