ಖಳ್ ನಾಯಕ್… 1993ರಲ್ಲಿ ಬಿಡುಗಡೆ ಈ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಈ ಸಿನಿಮಾದ ಚೋಲಿಕೆ ಪಿಚೆ ಕ್ಯಾಹೇ ಹಾಡು ಇಂದಿಗೂ ಯಾರೊಬ್ಬರೂ ಮರೆತಿಲ್ಲ. ಆದರೆ ಇದೀಗ ಇದೇ ಹಾಡಿನ ಹಿಂದಿನ ಕರಾಳ ಸತ್ಯವೊಂದು ಈಗ ಬಯಲಾಗಿದೆ.
ಸಿನಿ ಬದುಕು, ವೈಯಕ್ತಿಕ ಬದುಕಿನ ಕುರಿತಂತೆ ಸಚ್ ಕೆಹನಾ ತೋ ಅನ್ನೋ ಆತ್ಮ ಕಥನವನ್ನು ಬರೆದಿರುವ ನೀನಾ ಗುಪ್ತಾ ತಮ್ಮ ಸಿನಿ ಜರ್ನಿಯ ನೋವು ನಲಿವುಗಳನ್ನು ಬರೆದುಕೊಂಡಿದ್ದಾರೆ.
ಇದೇ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಜೊತೆಗೆ ಕಾಣಿಸಿಕೊಂಡಿರುವ ನೀನಾ ಗುಪ್ತಾ ಹಾಡು ಶೂಟಿಂಗ್ ಸಂದರ್ಭದಲ್ಲಿ ಏನಾಯ್ತು ಅನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ಹಾಡಿಗಾಗಿ ನೀನಾ ಅವರಿಗೆ ಗುಜರಾತಿ ಬುಡಕಟ್ಟು ಜನಾಂಗದವರಂತೆ ಕಾಣುವ ಬಟ್ಟೆಯನ್ನು ತೊಡಿಸಿ, ಲುಕ್ ಒಕೆ ಮಾಡೋ ಸಲುವಾಗಿ ನೀನಾರನ್ನು ನಿರ್ದೇಶಕ ಶುಭಾಷ್ ಗಾಯಿ ಬಳಿಗೆ ಕರೆದೊಯ್ಯಲಾಗಿತ್ತು.
ಈ ವೇಳ ನೀನಾರನ್ನು ನೋಡಿದ ಶುಭಾಷ್ ಗಾಯಿ ತುಂಬಾ ಅಪ್ ಸೆಟ್ ಆಗಿ ಮೇಲುಡುಪಿನ ಒಳಗೆ ಏನನ್ನಾದರೂ ತುರುಕಿ ಎಂದು ಎಲ್ಲರ ಮುಂದು ಕಾಸ್ಟ್ಯೂಮ್ ಡಿಸೈನರ್ಗೆ ಹೇಳಿದ್ದರಂತೆ. ನಿರ್ದೇಶಕರ ಮಾತಿನಂತೆ ಕಾಸ್ಟ್ಯೂಮ್ ಡಿಸೈನರ್ ನೀನಾರಿಗೆ ಪ್ಯಾಡೆಡ್ ಬ್ರಾ ತೊಡಿಸಿದ್ದರಂತೆ. ಐಟಂ ಸಾಂಗ್ನಲ್ಲಿ ತುಂಬಿದ ಎದೆಗಳಿರಬೇಕು. ಅದು ದೊಡ್ಡ ಗಾತ್ರದಲ್ಲಿ ಕಾಣುವಂತಿರಬೇಕು ಅನ್ನೋದು ಶುಭಾಷ್ ಗಾಯಿ ಉದ್ದೇಶವಾಗಿತ್ತು.
ಎಲ್ಲರ ಮುಂದೆ ತಮ್ಮ ಎದೆಯನ್ನು ನೋಡುತ್ತಾ ಶುಭಾಷ್ ಗಾಯಿ ಹೀಗೆ ಹೇಳಿದ್ದು ನೀನಾ ಅವರನ್ನು ತುಂಬಾ ಮುಜುಗರಕ್ಕೆ ಸಿಕ್ಕಿಸಿತ್ತು. ಆದರೆ ಶುಭಾಷ್ ಗಾಯಿಯಂತ ದೊಡ್ಡ ನಿರ್ದೇಶಕರ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದೆ ಪುಣ್ಯ ಎಂದು ನಟಿಸಿ ಬಂದೆ ಎಂದು ನೀನಾ ಬರೆದುಕೊಂಡಿದ್ದಾರೆ.
ಪ್ರಸ್ತುತ ಬಾಲಿವುಡ್ ಅಂಗಳದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನೀನಾ ಬಹುಬೇಡಿಕೆಯ ನಟಿಯಾಗಿದ್ದಾರೆ. ಈ ಹಿಂದೆ ಮದುವೆಯಾಗದೆ ಹೆಣ್ಣು ಮಗಳನ್ನು ಹೆತ್ತ ಕಾರಣಕ್ಕೆ ನೀನಾ ಸುದ್ದಿಯಾಗಿದ್ದರು. ಮಾಜಿ ಕ್ರಿಕೆಟಿಗ ವೀವಿಯನ್ ರಿಚರ್ಡ್ಸ್ರನ್ನು ಮದುವೆಯಾಗದೆ ಅವರ ಮಗುವಿನ ತಾಯಿಯಾಗಿದ್ದರಿಂದ ಆ ಕಾಲದಲ್ಲಿ ಹೆಡ್ ಲೈನ್ ಆಗಿದ್ದರು.
Discussion about this post