crossorigin="anonymous"> ಭೀಕರ ಅಪಘಾತಕ್ಕೆ ಸುಟ್ಟು ಕರಕಲಾದ ಬಸ್ – ಕೂದಲೆಳೆ ಅಂತರದಿಂದ ಪಾರಾದ ಚಂದನವನದ ನಟಿ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಭೀಕರ ಅಪಘಾತಕ್ಕೆ ಸುಟ್ಟು ಕರಕಲಾದ ಬಸ್ – ಕೂದಲೆಳೆ ಅಂತರದಿಂದ ಪಾರಾದ ಚಂದನವನದ ನಟಿ

Radhakrishna Anegundi by Radhakrishna Anegundi
25-03-21, 12 : 17 pm
in ಟಾಪ್ ನ್ಯೂಸ್
bus accident neema ray
Share on FacebookShare on TwitterWhatsAppTelegram

ನೆಲ್ಯಾಡಿ : ಬಸ್ ಹಾಗೂ ಕಂಟೈನರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್ ಹಾಗೂ ಕಂಟೈನರ್ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದು, ಕಂಟೈನರ್ ಚಾಲಕ ಸಜೀವವಾಗಿ ದಹನವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ನಡೆದಿದೆ.

ಬುಧವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಲಾರಿ ಮತ್ತು ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಎರಡೂ ವಾಹನಗಳು ಸುಟ್ಟು ಕರಕಲಾಗಿದೆ.

ದುರ್ಘಟನೆಯಲ್ಲಿ ಲಾರಿ ಚಾಲಕ ಸಜೀವ ದಹನಗೊಂಡಿದ್ದು, ಬಸ್​ನಲ್ಲಿದ್ದ ಪ್ರಯಾಣಿಕರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ.

nelyadi bus accident 3

ನೆಲ್ಯಾಡಿಯ ಕಲ್ಕುಲಾಡಿ ಗ್ರಾಮದ ಪೆರಿಯಶಾಂತಿ ಬಳಿ ಮಧ್ಯರಾತ್ರಿ 11.30 ರಿಂದ 12 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಮೃತಪಟ್ಟ ಕಂಟೈನರ್ ಚಾಲಕನನ್ನು ಮೈಸೂರು ಮೂಲದ ಸಂತೋಷ್ ಎಂದು ಗುರುತಿಸಲಾಗಿದೆ.

ರಾತ್ರಿ 11:50ರ ಸಮಯದಲ್ಲಿ ಬೆಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್ ಗೆ ರಭಸವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಖಾಸಗಿ ಬಸ್  ಮತ್ತು ಕ್ಯಾಂಟರ್ ಗೆ ಬೆಂಕಿ ಹೊತ್ತಿಕೊಂಡು ಉರಿದಿದೆ.

nelyadi bus accident 2

ಬಸ್ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಟೈನರ್ ನಲ್ಲಿ ಗ್ಯಾಸ್ ಬಳಕೆ ಮಾಡಲಾಗುತ್ತಿದ್ದು, ಅಪಘಾತದ ತೀವ್ರತೆಗೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿ ಉರಿದು ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಕಡಬ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಅವಘಡದಿಂದ ಗಾಬರಿಯಾಗಿದ್ದ ಪ್ರಯಾಣಿಕರನ್ನು ನಂತರ ಬೇರೊಂದು ಬಸ್‌ನಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಇದೇ ಬಸ್​ನಲ್ಲಿ ನಟಿ ನೀಮಾ ರೇ ಕೂಡ ಪ್ರಯಾಣ ಮಾಡುತ್ತಿದ್ದರು.

ray

ಘಟನೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನೀಮಾ ರೇ ನಾವೆಲ್ಲಾ ಬದುಕಿ ಬಂದಿರುವುದೇ ದೇವರ ಆಶೀರ್ವಾದ ಅಂದಿದ್ದಾರೆ.

ಇದನ್ನೂ ಓದಿ : ನೈಟಿ ಮಾತ್ರ ಹಾಕೋಬೇಡ ಮೇನಕಾ : ಐಟಂ ಸಾಂಗ್ ನಲ್ಲಿ ಕಿಕ್ಕೇರಿಸಿದ ಲಾಸ್ಯ

ಡಿಕ್ಕಿ ಹೊಡೆದ ತಕ್ಷಣ ಬಸ್​ನಲ್ಲಿ ಹೊಗೆ ಆವರಿಸಲಾರಂಭಿಸಿತು. ಅದರಿಂದ ಎಲ್ಲರೂ ಗಾಬರಿಗೊಂಡಿದ್ದಾರೆ. ಹೇಗೋ ಸಾಹಸಪಟ್ಟು ಬಾಗಿಲು ತೆರೆಯಲು ಪ್ರಯತ್ನಿಸಿ, ಬೆಂಕಿ ಆವರಿಸಿಕೊಳ್ಳುವ ಮುನ್ನ ಎಲ್ಲರೂ ಬಸ್​ನಿಂದ ಹೊರ ಬಂದಿದ್ದಾರೆ. ಸ್ವಲ್ಪವೇ ತಡವಾಗಿದ್ದರೂ ಎಲ್ಲರೂ ಸಜೀವದಹನ ಆಗಬೇಕಾಗಿತ್ತು.

ಇದನ್ನೂ ಓದಿ : ಮಾಸ್ಕ್ ಧರಿಸದಿದ್ರೆ ಚಾಲಕರ ಲೈಸೆನ್ಸ್ ರದ್ದು… ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ಕಾನೂನು

ಬಾಗಿಲು ತೆಗೆಯುವುದು ತುಂಬ ಕಷ್ಟ ಆಗಿತ್ತು. ಎಲ್ಲವೂ ಜಾಮ್​ ಆಗಿತ್ತು. ತುಂಬ ಕಷ್ಟಪಟ್ಟು ಹೊರಬಂದೆವು. ನಾನು ಈಗ ಚೆನ್ನಾಗಿದ್ದೇನೆ. ಎಲ್ಲ ಪ್ರಯಾಣಿಕರು ಸೇಫ್​ ಆಗಿದ್ದೇವೆ. ಕೆಲವರಿಗೆ ಗಾಯಗಳಾಗಿವೆ ಎಂದು ನೀಮಾ ರೇ ಘಟನೆ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ : ಆಟೋ ಹತ್ತುವ ಮುನ್ನ ಇರಲಿ ಎಚ್ಚರ… ಒಂದೇ ದಿನ 34 ಆಟೋ ಚಾಲಕರಿಗೆ ಕೊರೋನಾ ಸೋಂಕು

ನೀಮಾ ರೇ ಕನ್ನಡ ಹಾಗೂ ತುಳು ಚಿತ್ರಗಳಲ್ಲಿ ನಟಿಸಿದ್ದು ಇತ್ತೀಚೆಗೆ ಘೋಷಣೆಯಾದ 67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ತುಳು ಸಿನಿಮಾ ಎಂಬ ಗೌರವಕ್ಕೆ ಪಾತ್ರವಾದ ‘ಪಿಂಗಾರ’ ಸಿನಿಮಾದಲ್ಲಿ ನಟಿಸಿದ್ದಾರೆ.

ಟ್ರೆಂಡಿಂಗ್ ಸ್ಟೋರಿ – ಇದನ್ನು ಓದಿ : ಲಾಟರಿ ಮಾರಾಟಗಾರ್ತಿಯ ಪ್ರಾಮಾಣಿಕತೆಯಿಂದ ಆ ಕುಟುಂಬಕ್ಕೆ ಸಿಕ್ಕಿದ್ದು 6 ಕೋಟಿ…!

ಇದಕ್ಕಿಂತ ಮುಂಚೆ 14th Feb, ಆರಂಭ ಅನ್ನುವ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದರೊಂದಿಗೆ ತುಳುವಿನಲ್ಲಿ ಪಿಂಗಾರ, ದೊಂಬರಾಟ ದಗಲ್ ಬಾಜಿಲು ಅನ್ನುವ ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ….

Tags: accidentneema rayನೀಮಾ ರೇ
Share1TweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್